Advertisement

ಬಕಿಂಗಂ ಪ್ಯಾಲೇಸ್‌ ಗೋಡೆ ಏರಲೆತ್ನಿಸಿದಾತ ಸೆರೆ

11:49 AM Dec 12, 2017 | udayavani editorial |

ಲಂಡನ್‌ : ಇಲ್ಲಿನ ಇತಿಹಾಸ ಪ್ರಸಿದ್ಧ ಬಕಿಂಗಂ ಪ್ಯಾಲೇಸ್‌ ಆವರಣ ಗೋಡೆಯನ್ನು ಹೊರ ಭಾಗದಿಂದ ಏರಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಇದು ಭಯೋತ್ಪಾದನೆಗೆ ಸಂಬಂಧಿಸಿದ ಘಟನೆ ಅಲ್ಲ ಎಂಬುದನ್ನು ಪೊಲೀಸರು ದೃಢಪಡಿಸಿಕೊಂಡಿದ್ದಾರೆ.

Advertisement

ಬಕಿಂಗಂ ಪ್ಯಾಲೇಸ್‌ 91ರ ಹರೆಯದ ಎರಡನೇ ರಾಣಿ ಎಲಿಜಬೆತ್‌ ಅವರ ಅಧಿಕೃತ ನಿವಾಸವಾಗಿದೆ. ಎರಡನೇ ರಾಣಿ ಎಲಿಜಬೆತ್‌ ಬ್ರಿಟಿಷ್‌ ಇತಿಹಾಸದಲ್ಲಿ ಅತೀ ದೀರ್ಘಾವಧಿ ಆಡಳಿತೆ ನಡೆಸಿರುವ ರಾಣಿ ಎನಿಸಿಕೊಂಡಿದ್ದಾರೆ. 

24ರ ಹರೆಯದದ ವ್ಯಕ್ತಿಯು ಬಕಿಂಗಂ ಪ್ಯಾಲೇಸ್‌ ಆವರಣ ಗೋಡೆಯನ್ನು ಏರಲು ಯತ್ನಿಸಿದ ಕೇವಲ 3 ನಿಮಿಷಗಳ ಒಳಗೆ ಮೆಟ್ರೋಪಾಲಿಟನ್‌ ಪೊಲೀಸ್‌ ದಳದ ರಾಯಲ್ಟಿ ಮತ್ತು ಸ್ಪೆಶಲಿಸ್ಟ್‌ ಪ್ರೊಟೆಕ್ಷನ್‌ ಕಮಾಂಡ್‌ನ‌ ಸಿಬಂದಿಗಳು ಬಂಧಿಸಿದರು ಎಂದು ಮೂಲಗಳು ತಿಳಿಸಿವೆ.  

Advertisement

Udayavani is now on Telegram. Click here to join our channel and stay updated with the latest news.

Next