Advertisement

Maharashtra ;120 ಅಡಿ ಜಲಪಾತದಿಂದ ಹಾರಿದ ಯುವಕ ಮೃತ್ಯು: ವಿಡಿಯೋ ವೈರಲ್

06:41 PM May 06, 2024 | Team Udayavani |

ಪಾಲ್ಘರ್( ಮಹಾರಾಷ್ಟ್ರ): ಇಲ್ಲಿನ ದಾಭೋಸಾ ಜಲಪಾತದಲ್ಲಿ ಭಾನುವಾರ 120 ಅಡಿ ಎತ್ತರದಿಂದ ಧುಮುಕಿದ 24 ವರ್ಷದ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದು, ಆತನ ಸ್ನೇಹಿತ ತೀವ್ರವಾಗಿ ಗಾಯಗೊಂಡಿದ್ದಾನೆ.

Advertisement

ಮೇಜ್ ಶೇಖ್ ಎಂದು ಗುರುತಿಸಲಾದ ಯುವಕ ಮತ್ತು ಅವನ ಸ್ನೇಹಿತ ಜೋಫ್ ಶೇಖ್ ಬಂಡೆಯಿಂದ ಜಿಗಿದ ವಿಡಿಯೋ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ.

ಪೊಲೀಸ್ ಅಧಿಕಾರಿಗಳ ಪ್ರಕಾರ, ಮೇಜ್ ಮತ್ತು ಜೋಫ್, ಮೀರಾ ಭಯಂದರ್‌ನ ಮತ್ತೊಬ್ಬ ಸ್ನೇಹಿತನೊಂದಿಗೆ ಬೆಳಗ್ಗೆ ದಭೋಸಾ ಜಲಪಾತಕ್ಕೆ ಬಂದಿದ್ದು ಇಬ್ಬರು ಮೋಜಿಗಾಗಿ ಜಲಪಾತದ ಗುಂಡಿಗೆ ಧುಮುಕಿದ್ದ ವೇಳೆ ಅವಘಡ ಸಂಭವಿಸಿದೆ.

ಜೋಫ್ ಹೊರಬರುವಲ್ಲಿ ಯಶಸ್ವಿಯಾದನಾದರೂ ಸೊಂಟ, ಕಾಲುಗಳು ಮತ್ತು ಕುತ್ತಿಗೆಗೆ ಗಂಭೀರವಾದ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನೀರಿನ ಮಟ್ಟ ಕಡಿಮೆಯಿದ್ದ ಕಾರಣ ಪ್ರಾಣಹಾನಿ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next