Advertisement

ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ಕಾರ್ಮಿಕ ಖುಲಾಸೆ

12:23 PM Jan 11, 2018 | Team Udayavani |

ಥಾಣೆ : ನಾಲ್ಕು ವರ್ಷ ಪ್ರಾಯದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ ಭಿವಂಡಿ ಪಟ್ಟಣದ 40ರ ಹರೆಯ ವಿದ್ಯುನ್ಮಗ್ಗ ಕಾರ್ಮಿಕನೋರ್ವನನ್ನು ವಿಶೇಷ ನ್ಯಾಯಾಲಯ ಖುಲಾಸೆ ಗೊಳಿಸಿದೆ.

Advertisement

ಆರೋಪಿಯು ಅಪರಾಧ ಎಸಗಿದ್ದಾನೆ ಎಂಬುದನ್ನು ಶಂಕೆಗೆ ಆಸ್ಪದವಿಲ್ಲದ ರೀತಿಯಲ್ಲಿ ಸಾಬೀತು ಪಡಿಸಲು ಪ್ರಾಸಿಕ್ಯೂಶನ್‌ ವಿಫ‌ಲವಾಗಿರುವ ಕಾರಣಕ್ಕೆ ಆರೋಪಿಯನ್ನು ಖುಲಾಸೆ ಗೊಳಿಸುತ್ತಿರುವುದಾಗಿ ಪೋಕ್‌ಸೋ ಕಾಯಿದೆಯಡಿ ವಿಚಾರಣೆಯನ್ನು ಕೈಗೊಂಡ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಆರ್‌ ಎನ್‌ ಬಾವನ್‌ಕರ್‌ ತಮ್ಮ ತೀರ್ಪಿನಲ್ಲಿ ಹೇಳಿದರು. 

ಬಾಲಕಿಯ ಮೇಲಿನ ಅತ್ಯಾಚಾರದ ಘಟನೆ 2016ರ ನವೆಂಬರ್‌ 22ರಂದು ನಡೆದಿತ್ತು. ನಿಜಾಮ್‌ಪುರ ಪೊಲೀಸ್‌ ಠಾಣೆಯಲ್ಲಿ ಬಾಲಕಿಯ ತಾಯಿ ದೂರು ನೀಡಿದ ಪ್ರಕಾರ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next