ಮಂಗಳೂರು: ಮಿಸ್ಬಾ ಶಿಕ್ಷಣ ಸಂಸ್ಥೆಗಳ ಚೇರ್ಮನ್, ಮಾಜಿ ಶಾಸಕ ಮೊದಿನ್ ಬಾವಾ ಅವರ ಸಹೋದರ ಬಿ. ಎಂ. ಮಮ್ತಾಜ್ ಅಲಿ ಅವರನ್ನು ಬ್ಲ್ಯಾಕ್‌ಮೇಲ್ ಹಾಗೂ ಸುಲಿಗೆ ಮಾಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ದಂಪತಿ ಸಹಿತ ಎಲ್ಲ ಆರು ಆರೋಪಿಗಳ ನ್ಯಾಯಾಂಗ ಬಂಧನ ಮುಂದುವರೆದಿದೆ.
ಸುರತ್ಕಲ್ ಕೃಷ್ಣಾಪುರ ನಿವಾಸಿ ರೆಹಮತ್ ಮತ್ತು ಆಕೆಯ ಪತಿ ಶೋಯಬ್, ಇತರ ಆರೋಪಿಗಳಾದ ಮೊಹಮ್ಮದ್ ಸಿರಾಜ್ ಸಲಾಂ, ಕಾಟಿಪಳ್ಳ ಬೊಳ್ಳಾಜೆಯ ಅಬ್ದುಲ್ ಸತ್ತಾರ್, ಬಂಟ್ವಾಳ ಸಜಿಪ ಮುನ್ನೂರು ನಂದಾವರದ ಕಲಂದರ್ ಶಾ ಹಾಗೂ ಕೃಷ್ಣಾಪುರ 7ನೇ ಬ್ಲಾಕ್‌ನ ಮೊಹಮ್ಮದ್ ಮುಸ್ತಫಾ ನ್ಯಾಯಾಂಗ ಬಂಧನದಲ್ಲಿರುವವರು.
ಆರೋಪಿಗಳು ಮಮ್ತಾಜ್ ಅಲಿ ಜತೆಗೆ ರೆಹಮತ್‌ಗೆ ಅಕ್ರಮ ಸಂಬಂಧ ಇದೆ ಎಂದು ಪ್ರಚಾರ ಮಾಡಿ ಹೆಸರು ಹಾಳು ಮಾಡುವುದಾಗಿ ಹೆದರಿಸಿ ಬ್ಲ್ಯಾಕ್ ಮೇಲ್ ಮಾಡಿ 75 ಲ.ರೂ ಪಡೆದುಕೊಂಡಿದ್ದರು. ಅಲ್ಲದೆ ಇನ್ನೂ 50 ಲ.ರೂ. ಕೊಡಬೇಕೆಂದು ನಿರಂತರ ಬೆದರಿಕೆ ಹಾಕಿದ್ದರು. ಮಮ್ತಾಜ್ ಅವರ ಅಣ್ಣನ ಮನೆಯವರಿಗೂ ಬೆದರಿಕೆ ಹಾಕಿದ್ದರು. ಈ ಮೂಲಕ ಮಮ್ತಾಜ್ ಅಲಿ ಅವರ ಸಾವಿಗೆ ಈ ಆರು ಮಂದಿ ಆರೋಪಿಗಳು ಕಾರಣರಾಗಿದ್ದಾರೆ. ಈ ಬಗ್ಗೆ ಮಮ್ತಾಜ್ ಅಲಿ ಅವರು ತನ್ನ ಅಣ್ಣನಿಗೆ ವಾಯ್ಸ ಮೆಸೇಜ್ ಕಳುಹಿಸಿದ್ದಾರೆ ಎಂಬಿತ್ಯಾದಿಯಾಗಿ ಕಾವೂರು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಮಮ್ತಾಜ್ ಅಲಿ ಅವರ ಕಾರು ಅಪಘಾತಕ್ಕೀಡಾದ ಸ್ಥಿತಿಯಲ್ಲಿ ಅ. 6ರಂದು ಮುಂಜಾವ ಕೂಳೂರು ಸೇತುವೆ ಬಳಿ ಪತ್ತೆಯಾಗಿತ್ತು. ಅ. 8ರಂದು ಅಲಿ ಅವರ ಮೃತದೇಹ ಸೇತುವೆ ಸಮೀಪದಲ್ಲಿ ಫಲ್ಗುಣಿ ನದಿಯಲ್ಲಿ ಪತ್ತೆಯಾಗಿತ್ತು. ಆರೋಪಿಗಳು ಸದ್ಯ ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿದ್ದಾರೆ. ಆರೋಪಿಗಳು ಇತರ ಯಾವುದೇ ಹನಿಟ್ರ್ಯಾಪ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾಹಿತಿ ವಿಚಾರಣೆ ವೇಳೆ ಗೊತ್ತಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಹಿಳೆಗೆ ಮಾಡಿದ ಸಹಾಯವೇ ಮುಳುವಾಯ್ತು!
ಮಮ್ತಾಜ್ ಅವರ ಆಡಳಿತದ ಮಿಸ್ಬಾ ಕಾಲೇಜಿನಲ್ಲಿ ಉದ್ಯೋಗಿಯಾಗಿದ್ದ ರೆಹಮತ್‌ಗೆ ಮಮ್ತಾಜ್ ಜತೆ 3 ವರ್ಷದಿಂದ ಪರಿಚಯವಿತ್ತು. ರೆಹಮತ್ ಅವರ ಕಷ್ಟಕಾಲದಲ್ಲಿ ಮಮ್ತಾಜ್ ಸಹಾಯ ಮಾಡಿದ್ದು, ಅದನ್ನೇ ಬಳಸಿಕೊಂಡು ಬ್ಲ್ಯಾಕ್‌ವೆುàಲ್‌ಗೆ ಆಕೆ ಮುಂದಾಗಿದ್ದಳು. 50 ಲ.ರೂ. ನೀಡಿ ಪ್ರಕರಣವನ್ನು ಇತ್ಯರ್ಥಪಡಿಸಲು ಯತ್ನ ನಡೆದಿತ್ತು. ಈ ನಡುವೆ ಮಮ್ತಾಜ್ ಜತೆ ರೆಹಮತ್ ಮಾತುಕತೆಯಾಡಿದ ವಾಯ್ಸ ಕ್ಲಿಪ್ ಅನ್ನು ಬಳಸಿಕೊಂಡು ಸತ್ತಾರ್ ಬ್ಲ್ಯಾಕ್‌ವೆುಲ್‌ಗೆ ಮುಂದಾಗಿದ್ದ ಎನ್ನಲಾಗಿದೆ. ಇದರಿಂದ ಮಾನಸಿಕವಾಗಿ ಜರ್ಜರಿತರಾದ ಮಮ್ತಾಜ್ ಆತ್ಮಹತ್ಯೆಗೆ ನಿರ್ಧರಿಸಿದ್ದರು ಎಂದು ಹೇಳಲಾಗಿದೆ.