ಸಂತೆಮರಹಳ್ಳಿ: ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮವು ತಾಲೂಕಿನ ದೊಡ್ಡ ಗ್ರಾಮಗಳಲ್ಲಿ ಒಂದಾಗಿದೆ. ಇಲ್ಲಿ ಎಲ್ಲಾ ಸಮುದಾಯದ ಜನರೂ ವಾಸವಾಗಿದ್ದಾರೆ. ಆದರೆ ಇನ್ನೂ ಕೂಡ ಮೂಲ ಸಮಸ್ಯೆಗಳು ಹೆಚ್ಚಾಗಿದ್ದು ಆದಷ್ಟು ಬೇಗ ಅಧಿಕಾರಿಗಳೊಂದಿಗೆ ಚರ್ಚಿಸಿ ಇದರ ಸಮಗ್ರ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದು ಶಾಸಕ ಎನ್. ಮಹೇಶ್ ತಿಳಿಸಿದರು.
ಅವರು ಗುರುವಾರ ಗ್ರಾಮದ ಸಿದ್ದೇಶ್ವರಪೇಟೆಯಲ್ಲಿ 50 ಲಕ್ಷ ರೂ. ವೆಚ್ಚದ ಚರಂಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಮಾಂಬಳ್ಳಿ ಗ್ರಾಮದ ಸಾರ್ವಜನಿಕರಿಗೆ ಚರಂಡಿ ನೀರು ಹೊರ ಸಾಗಿಸುವುದೇ ಸಾವಾಲಿನ ಕೆಲಸವಾಗಿದೆ.
ಇಲ್ಲಿನ ಕೆಲ ಬಡಾವಣೆಗಳ ಮದ್ಯ ಇರುವ ದೊಡ್ಡ ಹಳ್ಳಗಳಲ್ಲಿ ಕಟ್ಟೆಗಳಲ್ಲಿ ಕಲುತ ನೀರು ನಿಲ್ಲುತ್ತಿದೆ. ಈ ಬಗ್ಗೆ ಹಲವು ಬಾರಿ ದೂರುಗಳು ಕೇಳಿ ಬಂದಿವೆ. ಈಗ ನಡೆಯುತ್ತಿರುವ ಚರಂಡಿ ಕಾಮಗಾರಿಗೆ ಕೆಲ ಖಾಸಗಿ ವ್ಯಕ್ತಿಗಳ ಜಮೀನಿನವರು ಆಕ್ಷೇಪ ವ್ಯಕ್ತಪಡಿಸುತ್ತಾರೆ ಎಂದು ಕೆಲವು ಗ್ರಾಮಸ್ಥರು ದೂರಿದ್ದಾರೆ.
ಇದಕ್ಕೆ ಸಂಬಂಧಪಟ್ಟಂತೆ ತಹಶೀಲ್ದಾರ್ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು. ಅಲ್ಲದೆ ಇನ್ನಷ್ಟು ಬಡಾವಣೆಗಳ ಅಭಿವೃದ್ಧಿಗೂ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನಗಳನ್ನು ಬಿಡುಗಡೆಗೊಳಿಸಿ ಶೀಘ್ರದಲ್ಲೇ ಕೆಲಸವನ್ನು ಆರಂಭಿಸಲಾಗುವುದು ಎಂದರು.
ತಾಪಂ ಸದಸ್ಯ ಸಿದ್ದರಾಜು ಗ್ರಾಪಂ ಸದಸ್ಯ ಪರಶಿವಮೂರ್ತಿ ಮುಖಂಡರಾದ ರಾಮು, ಅಶ್ವಥ್, ಫೈರೋಜ್‌ಪಾಷ, ಪಿಡಿಒ ಭಾರತಿ ಬಾರ್ಕಿ ಜೆಇ ಶಿವಕುಮಾರ್ ಇತರರು ಇದ್ದರು.