Advertisement

ರಾಜ್ಯಮಟ್ಟದ ತರಬೇತಿ ಶಿಬಿರಕ್ಕೆ ಮಮತಾ ಭೇಟಿ

04:32 PM Jun 28, 2018 | Team Udayavani |

ಧಾರವಾಡ: ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ ಇಲ್ಲಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ನಡೆದಿರುವ ಐದು ದಿನಗಳ ರಾಜ್ಯಮಟ್ಟದ ತರಬೇತಿ ಶಿಬಿರಕ್ಕೆ ಬೆಳಗಾವಿಯ ಶಿಕ್ಷಕರ ಸರಕಾರಿ ಶಿಕ್ಷಣ ಮಹಾವಿದ್ಯಾಲಯ (ಸಿಟಿಇ)ದ ಪ್ರಾಚಾರ್ಯೆ ಮಮತಾ ನಾಯಕ ಬುಧವಾರ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದರು.

Advertisement

ಈ ವೇಳೆ ಶಿಬಿರಾರ್ಥಿಗಳೊಂದಿಗೆ ಮಾತನಾಡಿದ ಅವರು, ಪ್ರತಿ ಜಿಲ್ಲಾ ಹಂತದಲ್ಲಿ ಪ್ರೌಢಶಾಲಾ ಗಣಿತ ಶಿಕ್ಷಕ-ಶಿಕ್ಷಕಿಯರ ತರಬೇತಿಗಳು ನಿರ್ದಿಷ್ಟ ನೆಲೆಯಲ್ಲಿ ನಿಗದಿತ ಗುರಿ ತಲುಪುವಲ್ಲಿ ವಿಷಯಾಧಾರಿತ ಸಂಪನ್ಮೂಲಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ತರಬೇತಿಯ ಆಶಯಗಳು ವಿಫಲಗೊಳ್ಳದಂತೆ ಅಗತ್ಯ ಚಿಂತನೆ ಎಲ್ಲರೊಳಗೆ ಇರಬೇಕಾಗುತ್ತದೆ. ಕಲಬುರ್ಗಿ ಹಾಗೂ ಬೆಳಗಾವಿ ಕಂದಾಯ ವಿಭಾಗಗಳ ಎಲ್ಲ 15 ಜಿಲ್ಲೆಗಳಲ್ಲಿ ಗಣಿತ ತರಬೇತಿ ಶಿಬಿರಗಳು ಯಶಸ್ವಿಯಾಗುವಲ್ಲಿ ಎಲ್ಲ ಎಂ.ಆರ್‌.ಪಿ.ಗಳು ಆಸಕ್ತಿಯಿಂದ ಶ್ರಮಿಸಬೇಕು ಎಂದರು.

ಡಯಟ್‌ ಸಂದರ್ಶನ: ಇದೇ ಸಂದರ್ಭದಲ್ಲಿ ಡಯಟ್‌ನ ಗಣಿತ ಪ್ರಯೋಗಾಲಯ, ಆಂಗ್ಲಭಾಷಾ ಪ್ರಯೋಗಾಲಯ, ವಿಜ್ಞಾನ ಪ್ರಯೋಗಾಲಯ, ಶೈಕ್ಷಣಿಕ ತಂತ್ರಜ್ಞಾನ ವಿಭಾಗ, ವೀಡಿಯೋ ಕಾನ್ಫರನ್ಸ್‌ ಹಾಲ್‌, ಶತಮಾನ ಕಂಡ ಗ್ರಂಥಾಲಯ ಸೇರಿದಂತೆ ವಿವಿಧ ವಿಭಾಗಗಳನ್ನು ಸಂದರ್ಶನ ಮಾಡಿದ ಮಮತಾ ನಾಯಕ ಡಯಟ್‌ ಆವರಣದ ಪ್ರಗತಿಗಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಭಿವೃದ್ಧಿ ಉಪನಿರ್ದೇಶಕರಾದ ಪ್ರಿ. ಸುಮಂಗಳಾ ಪಿ. ಕುಚಿನಾಡ ಡಯಟ್‌ನಲ್ಲಿ ಕೈಕೊಂಡ ಎಲ್ಲ ಪ್ರಗತಿ ಚಿತ್ರಣದ ವಿವರ ನೀಡಿದರು. ತರಬೇತಿ ಶಿಬಿರದ ನೋಡಲ್‌ ಅಧಿಕಾರಿ ವ.ಬಿ. ಬಾದವಾಡಗಿ, ಸಹ ನೋಡಲ್‌ ಅಧಿಕಾರಿ ಎಚ್‌. ಎಚ್‌. ಮೇಟಿ, ಅಶೋಕಕುಮಾರ ಸಿಂದಗಿ, ಮಂಗಳಾ ಪಾಟೀಲ, ಸಿಟಿಇ ಉಪನ್ಯಾಸಕಿ ಡಾ| ಶೋಭಾ ನಾಯ್ಕರ್‌, ಸುಜಾತಾ ತಿಮ್ಮಾಪುರ, ವಿಜಯಲಕ್ಷ್ಮೀ ಹಂಚಿನಾಳ, ಲಲಿತಾ ಹರ್ಲಾಪುರ, ನಫೀಸ್‌ಬಾನು ದಾವಲಸಾಬನವರ, ಸುಗಂಧಾ ದೊಡಮನಿ ಇದ್ದರು. ಗುರುಮೂರ್ತಿ ಯರಗಂಬಳಿಮಠ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next