Advertisement

Opposition Meeting; ಜುಲೈ 17 ರ ಔತಣಕೂಟಕ್ಕೆ ಮಮತಾ ಬ್ಯಾನರ್ಜಿ ಗೈರು

08:26 PM Jul 15, 2023 | Vishnudas Patil |

ಕೋಲ್ಕತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶಸ್ತ್ರಚಿಕಿತ್ಸೆಯ ನಂತರದ ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕಾಗಿರುವುದರಿಂದ ಜುಲೈ 17 ರಂದು ಪ್ರತಿಪಕ್ಷದ ಔತಣಕೂಟದಲ್ಲಿ ಭಾಗವಹಿಸುವುದಿಲ್ಲ, ಆದರೆ ಜುಲೈ 18 ರಂದು ಹಗಲಿನ ಸಭೆಯ ಭಾಗವಾಗಲಿದ್ದಾರೆ ಎಂದು ಟಿಎಂಸಿ ಮೂಲಗಳು ಶನಿವಾರ ತಿಳಿಸಿವೆ.

Advertisement

ಗುರುವಾರ ಕೋಲ್ಕತಾದ ಸರಕಾರಿ ಸ್ವಾಮ್ಯದ ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ಬ್ಯಾನರ್ಜಿ ಅವರು ಎಡ ಮೊಣಕಾಲಿಗೆ ಮೈಕ್ರೋಸರ್ಜರಿ ಮಾಡಿಸಿಕೊಂಡಿದ್ದಾರೆ. ಜೂನ್ 27 ರಂದು ಉತ್ತರ ಬಂಗಾಳದ ಸೆವೋಕ್ ಏರ್‌ಬೇಸ್‌ನಲ್ಲಿ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್ ಸಮಯದಲ್ಲಿ ಅಸ್ಥಿರಜ್ಜು ಗಾಯಕ್ಕೊಳಗಾಗಿದ್ದರು.

“ವೈದ್ಯರು ವಿಮಾನದಲ್ಲಿ ಹಾರಲು ಮತ್ತು ವಿರೋಧ ಪಕ್ಷದ ಶೃಂಗಸಭೆಯಲ್ಲಿ ಭಾಗವಹಿಸಲು ಅನುಮತಿ ನೀಡಿದ್ದರೂ, ಆಕೆಗೆ ವಿಶ್ರಾಂತಿಗೆ ಸಲಹೆ ನೀಡಲಾಗಿದೆ. ಆದ್ದರಿಂದ ಅವರು ಔತಣಕೂಟದಲ್ಲಿ ಭಾಗಿಯಾಗುವುದಿಲ್ಲ, ಆದರೆ ಜುಲೈ 18 ರಂದು ದಿನವಿಡೀ ನಡೆಯುವ ಸಭೆಯಲ್ಲಿ ಭಾಗವಹಿಸುತ್ತಾರೆ ಎಂದು ಟಿಎಂಸಿ ಮೂಲಗಳು ತಿಳಿಸಿವೆ.

ವಿರೋಧ ಪಕ್ಷಗಳ ನಾಯಕರಿಗೆ ಔತಣಕೂಟವನ್ನು ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯೋಜಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next