Advertisement

ನಮಗೆ ಇವಿಎಂ ಬೇಡ; ನಾವು ಮತಪತ್ರಕ್ಕೆ ಮರಳಬೇಕು: ಮಮತಾ ಬ್ಯಾನರ್ಜಿ

10:12 AM Jun 05, 2019 | Sathish malya |

ಕೋಲ್ಕತ : ಪಶ್ಚಿಮ ಬಂಗಾಲದ ಮತದಾರರಲ್ಲಿ ಭಾರತೀಯ ಜನತಾ ಪಕ್ಷದ ಒಲವು 2019ರ ಲೋಕಸಭಾ ಚುನಾವಣೆಯಲ್ಲಿ ಗಮನಾರ್ಹವಾಗಿ ಹೆಚ್ಚಿರುವುದನ್ನು ಸಹಿಸಲಾಗದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚುನಾವಣಾ ರಾಜಕೀಯಕ್ಕೆ ಸಂಬಂಧಿಸಿದಂತೆ ತಮ್ಮ ಮುಂದಿನ ವ್ಯೂಹಗಾರಿಕೆಯನ್ನು ಬಹಿರಂಗಪಡಿಸಿದ್ದಾರೆ.

Advertisement

“ನಾವು ಪ್ರಜಾಸತ್ತೆಯ ಉಳಿವಿಗಾಗಿ ಮನೆಮನೆ ಭೇಟಿ ನೀಡುವ ಆಂದೋಲನವನ್ನು ಆರಂಭಿಸುತ್ತೇವೆ; ನಮಗೆ ಇವಿಎಂ ಗಳು ಬೇಕಾಗಿಲ್ಲ; ನಾವು ಮತ್ತೆ ಮತ ಪತ್ರ ಯುಗಕ್ಕೆ ಮರಳುವ ಅಗತ್ಯವಿದೆ; ಇವಿಎಂ ಸಾಚಾತನದ ಬಗ್ಗೆ ಸತ್ಯಶೋಧನ ಸಮಿತಿಯನ್ನು ರೂಪಿಸುವ ಅಗತ್ಯವಿದೆ’ ಎಂದು ಮಮತಾ ಗುಡುಗಿದ್ದಾರೆ.

ಪಶ್ಚಿಮ ಬಂಗಾಲದಲ್ಲಿ 2014ರಲ್ಲಿ ಕೇವಲ ಎರಡು ಸ್ಥಾನಗಳನ್ನು ಮಾತ್ರವೇ ಗೆದ್ದಿದ್ದ ಬಿಜೆಪಿ 2019ರ ಲೋಕಸಭಾ ಚುನಾವಣೆಯಲ್ಲಿ ದಾಖಲೆಯ 18 ಸೀಟುಗಳನ್ನು ಗೆಲ್ಲುವ ಮೂಲಕ ಹೊಸ ಇತಿಹಾಸವನ್ನೇ ಬರೆದಿದೆ. ಇದು ಮಮತಾ ಬ್ಯಾನರ್ಜಿ ಅವರನ್ನು ಕಂಗಾಲುಗೊಳಿಸಿದೆ.

ಪಶ್ಚಿಮ ಬಂಗಾಲದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯ ಎಲ್ಲ ಹಂತಗಳಲ್ಲಿ ಹಿಂಸೆ, ದೊಂಬಿ ಸ್ಫೋಟಗೊಂಡಿದೆ. ಇವೆಲ್ಲಕ್ಕೂ ಬಿಜೆಪಿಯೇ ಕಾರಣ ಎಂದು ಮಮತಾ ದೂರಿದ್ದಾರೆ. ಮೇಲಾಗಿ ಚುನಾವಣಾ ಆಯೋಗ ಬಿಜೆಪಿಯ ನಿರ್ದೇಶನದ ಪ್ರಕಾರ ಕೆಲಸ ಮಾಡುತ್ತಿದೆ; ಚುನಾವಣಾ ಆಯೋಗದ ಅಧಿಕಾರಿಗಳೆಲ್ಲರೂ ಆರ್‌ಎಸ್‌ಎಸ್‌ ಸದಸ್ಯರಾಗಿದ್ದಾರೆ ಎಂದೆಲ್ಲ ಮಮತಾ ದೂರಿದ್ದರು.

ಆದರೆ ಪಶ್ಚಿಮ ಬಂಗಾಲದ ಮತದಾರರು ಮಮತಾ ಆಡಳಿತ ವೈಖರಿ, ಬಹುಕೋಟಿ ಶಾರದಾ ಚಿಟ್‌ ಫ‌ಂಡ್‌ ಹಗರಣ ಇತ್ಯಾದಿಗಳಿಂದ ಬೇಸತ್ತಿರುವುದನ್ನು ಚುನಾವಣೆಯಲ್ಲಿ ಬಹಿರಂಗಪಡಿಸಿದ್ದಾರೆ; ಮೇಲಾಗಿ ಚುನಾವಣೆ ಬಳಿಕ ಟಿಎಂಸಿಯ ಅನೇಕ ಶಾಸಕರು, ಕೌನ್ಸಿಲರ್‌ಗಳು ಬಿಜೆಪಿ ಸೇರಿರುವುದು ಮಮತಾ ಅವರ ನಿದ್ದೆಗೆಡಿಸಿದೆ ಎಂದು ವರದಿಗಳು ಹೇಳುತ್ತವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next