Advertisement

2024ರಲ್ಲಿ ಬಿಜೆಪಿಗೆ ಸೋಲು: ದೀದಿ

07:15 PM Jul 21, 2022 | Team Udayavani |

ಕೋಲ್ಕತ: “2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯುವುದಕ್ಕೆ ಸಾಧ್ಯವಿಲ್ಲ’ ಹೀಗೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

Advertisement

ಕೋಲ್ಕತದಲ್ಲಿ ಗುರುವಾರ ಟಿಎಂಸಿ ಆಯೋಜಿಸಿದ್ದ ಹುತಾತ್ಮರ ದಿನಾಚರಣೆ ರ್ಯಾಲಿಯಲ್ಲಿ ಭಾಗವಹಿಸಿದ ಅವರು ಈ ಮಾತನ್ನಾಡಿದ್ದಾರೆ.

“2024ರ ಚುನಾವಣೆಯು ತಿರಸ್ಕಾರ ಚುನಾವಣೆಯಾಗಬೇಕು. ಜನಪರ ಸರ್ಕಾರ ರಚನೆಯಾಗಬೇಕು. ಬಿಜೆಪಿ ಕೆಲವೊಮ್ಮೆ ಹಿಂದೂ ಕಾರ್ಡ್‌ ಬಳಸಿದರೆ ಕೆಲವೊಮ್ಮೆ ಮುಸ್ಲಿಂ ಕಾರ್ಡ್‌, ಆದಿವಾಸಿ ಕಾರ್ಡ್‌ ಬಳಸುತ್ತದೆ. ಆದರೆ ಆದಿವಾಸಿಗಳಿಗಾಗಿ ಏನನ್ನೂ ಮಾಡಿಲ್ಲ. ಈಗ ಮುಂಬೈ ಸರ್ಕಾರ ಬೀಳಿಸಿರುವ ಅವರು ಮುಂದೆ ಛತ್ತೀಸ್‌ಗಢ ಮತ್ತು ಬಂಗಾಳ ಸರ್ಕಾರವನ್ನೂ ಮುರಿಯುವ ಭ್ರಮೆಯಲ್ಲಿದ್ದಾರೆ. ನಾನು ಅವರಿಗೆ ಎಚ್ಚರಿಸುತ್ತೇನೆ. ಇಲ್ಲಿಗೆ ಬರಬೇಡಿ. ಇಲ್ಲಿರುವುದು ಬಂಗಾಳದ ರಾಯಲ್‌ ಹುಲಿಗಳು’ ಎಂದು ಅವರು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next