ಕೊಲ್ಕತ್ತಾ : ಭಾನುವಾರ(ಫೆ. 7) ಸಂಜೆ ಪುರ್ಬಾ ಮೆದಿನಿಪುರ ಜಿಲ್ಲೆಯ ಹಲ್ಡಿಯಾದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಿಗದಿತ ಕಾರ್ಯಕ್ರಮಕ್ಕೆ . ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಹುತೇಕ ಹಾಜರಾಗುವುದಿಲ್ಲ ಎಂದು ರಾಜ್ಯ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಓದಿ : ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ
ಯಾಕೆ ಹಾಜರಾಗುತ್ತಿಲ್ಲ ಎನ್ನುವ ಮಾಹಿತಿ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಜನವರಿ 23 ಪರಾಕ್ರಮ್ ದಿನದಂದು ಮೋದಿ ಭಾಷಣ ಮಾಡುವ ಸಂದರ್ಭದಲ್ಲಿ ಪ್ರೇಕ್ಷಕರು “ಜೈ ಶ್ರೀರಾಮ್” ಘೋಷಣೆ ಕೂಗಿರುವುದರಿಂದ ಮಮತಾ ಬ್ಯಾನರ್ಜಿ ಅವರಿಗೆ ಆದ ಅವಮಾನವೇ ಇಂದು ನಡೆಯುವ ಕಾರ್ಯಕ್ರಮಕ್ಕೆ ಗೈರಾಗುತ್ತಿರುವುದಕ್ಕೆ ಕಾರಣ ಎನ್ನಲಾಗುತ್ತಿದೆ.
ಹಲ್ಡಿಯಾದಲ್ಲಿ ತೈಲ, ಅನಿಲ ಮತ್ತು ಇನ್ಫಾಸ್ಟ್ರಕ್ಚರ್ ಸೆಕ್ಟರ್ ಸೇರಿ ನಾಲ್ಕು ಯೋಜನೆಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಆದರೇ, ಹಲ್ಡಿಯಾದಲ್ಲಿ ಈ ಸಂಜೆ ನಡೆಯುವ ಕಾರ್ಯಕ್ರಮಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಜರಾಗುವ ಸಾಧ್ಯತೆ ಇಲ್ಲ ಎಂದು ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಓದಿ : ಶರಣ್ ಬರ್ತ್‌ಡೇ ಸ್ಪೆಷಲ್: ಗುರು ಶಿಷ್ಯರು ಫಸ್ಟ್‌ಲುಕ್