Advertisement

ಮಮತಾ ಬ್ಯಾನರ್ಜಿ ಅವರ ಒಟ್ಟು ಆಸ್ತಿ ಮೌಲ್ಯ ಎಷ್ಟೆಂದು ನಿಮಗೆ ತಿಳಿದಿದೆಯೇ..?

06:09 PM Mar 12, 2021 | Team Udayavani |

ನಂದಿಗ್ರಾಮ : ತೃಣಮೂಲ ಕಾಂಗ್ರೆಸ್ ನ ನಾಯಕಿ ಹಾಗೂ ಪಶ್ಚಿಮ ಬಂಗಾಳಕದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಒಟ್ಟು ಆಸ್ತಿ ಮೌಲ್ಯ 16.72 ಲಕ್ಷ ಎಂದು ಘೋಷಿಸಿಕೊಂಡಿದ್ದಾರೆ.

Advertisement

ಪುರ್ಭಾ ಮೇದಿನಿಪುರ್ ಜಿಲ್ಲೆಯ ನಂದಿಗ್ರಾಮ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಮಮತಾ ಬ್ಯಾನರ್ಜಿ, ತನ್ನ ಬಳಿ ಯಾವುದೇ ವಾಹನಗಳಿಲ್ಲ, ಆಸ್ತಿಗಳಿಲ್ಲ ಎಂದು ಭಾರತದ ಚುನಾವಣಾ ಆಯೋಗದ ಮುಂದೆ ಸಲ್ಲಿಸಿದ ಪ್ರಮಾಣ ಪತ್ರದ ಮೂಲಕ ತಿಳಿಸಿದ್ದಾರೆ.

ಓದಿ : ಮಾರ್ಚ್ 13ರಂದು ಉದಯವಾಣಿ ಡಾಟ್ ಕಾಮ್ ಫೇಸ್ ಬುಕ್ ಲೈವ್ ನಲ್ಲಿ ರೂಪೇಶ್ ಶೆಟ್ಟಿ

66 ವರ್ಷದ ಮಮತಾ ಬ್ಯಾನರ್ಜಿ ಅವರಲ್ಲಿ ಒಟ್ಟು 16.72 ಲಕ್ಷ ರೂ. ಅಷ್ಟು ಚರಾಸ್ತಿ ಇದೆ. 2016ರ ಚುನಾವಣಾ ಸಂದರ್ಭದಲ್ಲಿ 30.45 ಲಕ್ಷ ರೂ ಆಸ್ತಿಯನ್ನು ಹೊಂದಿದ್ದರು.  ಈ ಪ್ರಕಾರ ಮಮತಾ ಬ್ಯಾನರ್ಜಿ ಕಳೆದ ಚುನಾವಣೆಯಲ್ಲಿ ಘೋಷಿಸಿಕೊಂಡ ಆಸ್ತಿಗಿಂತ ಕಡಿಮೆಯಾಗಿದೆ.

2019-20ನೇ ಸಾಲಿನ ಆಕೆಯ ಆದಾಯ, 10,34,370

Advertisement

ಇನ್ನು, ಮಮತಾ ಬ್ಯಾನರ್ಜಿ ಅವರಲ್ಲಿ 69, 255 ರೂ ನಗದು ಹಣ ಇದೆ. ಒಟ್ಟು

ಬ್ಯಾಂಕ್ ಬ್ಯಾಲನ್ಸ್ 13.53 ಲಕ್ಷ ಇದ್ದು, ಇದರಲ್ಲಿ 1.51 ಲಕ್ಷ ಚುನಾವಣಾ ವೆಚ್ಚದ ಖಾತೆಯನ್ನು ಸೇರಿದೆ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದಲ್ಲಿ(National Saving Certificate) 18,480  ರೂ ಇದೆ .

ಬ್ಯಾನರ್ಜಿ 43, 837 ರೂ. ಗಳ ಪಂಬತ್ತು ಗ್ರಾಂ ಆಭರಣಗಳನ್ನು ಹೊಂದಿದ್ದಾರೆ.

ಇನ್ನು, ಮಮತಾ ಅವರ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆ ಬಾಕಿ ಇಲ್ಲ. ಕಲ್ಕತ್ತಾದ ವಿಶ್ವವಿದ್ಯಾಲಯದಿಂದ ಎಮ್ ಎ ಹಾಗೂ ಎಲ್ ಎಲ್ ಬಿ ಪದವಿಯನ್ನು ಪಡೆದಿದ್ದಾರೆ.

ಓದಿ :  ಕೋವಿಡ್ ಪ್ರಕರಣ ಹೆಚ್ಚಳ; ಪುಣೆ ಶಾಲಾ, ಕಾಲೇಜುಗಳು ಮತ್ತೆ ಬಂದ್, ರಾತ್ರಿ ಕರ್ಫ್ಯೂ ಜಾರಿ

Advertisement

Udayavani is now on Telegram. Click here to join our channel and stay updated with the latest news.

Next