Advertisement

ದೇಶದ ಅತ್ಯಂತ ದೊಡ್ಡ ದಂಗೆಕೋರ ಮೋದಿ : ಮಮತಾ ಬ್ಯಾನರ್ಜಿ

03:49 PM Feb 24, 2021 | Team Udayavani |

ಪಶ್ಚಿಮ ಬಂಗಾಳ : ತಮ್ಮ ಅಳಿಯ ಅಭಿಷೇಕ್ ಬ್ಯಾನರ್ಜಿ ಅವರ ಹೆಂಡತಿಯನ್ನು ಕೇಂದ್ರೀಕರಿಸಿ ಮಾಡಿದ ಸಿಬಿಐ ದಾಳಿಗೆ ಸಂಬಂಧಿಸಿದ ವಿಚಾರಕ್ಕೆ ಪ್ರಧಾನಿ ಮೋದಿಯವರನ್ನು ದಂಗೆಕೋರ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.

Advertisement

ಮೋದಿ ದೇಶದ ಅತ್ಯಂತ ದೊಡ್ಡ ದಂಗೆಕೋರ ಎಂದು ಕೋಲ್ಕತ್ತಾ ಸಮೀಪದಲ್ಲಿ ನಡೆಯುತ್ತಿದ್ದ ಚುನಾವಣಾ ಪ್ರಚಾರವನ್ನುದ್ದೇಶಿಸಿ ಮಾತನಾಡುವಾಗ ಹೇಳಿದ್ದಾರೆ.

ಓದಿ : ಕಳೆದುಹೋದ ಮರ್ಯಾದೆ ಮತ್ತೆ ಬರುವಂತೆ ದುರ್ಗಾ ದೇವಿಗೆ ಪತ್ರ ಬರೆದು ಬೇಡಿಕೊಂಡ ಭಕ್ತ!

ಕಳೆದ ನವೆಂಬರ್ ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಟ್ ಟ್ರಂಪ್ ಸೋತಾಗ ಅನುಭವಿಸಿದ ಹಿಂಸಾಚಾರಕ್ಕಿಂತಲೂ ಕೆಟ್ಟ ಪರಿಸ್ಥಿತಿ ಇಲ್ಲಿಯೂ ಕೂಡ ಸಂಭವಿಸಲಿದೆ ಎಂದು ಬ್ಯಾನರ್ಜಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಗೆ ನಾನು ಗೋಲ್ ಕೀಪರ್ ನಂತೆ ಇರುತ್ತೇನೆ. ಬಿಜೆಪಿ ಒಂದಂಕಿಯನ್ನೂ ಪಡೆಯದಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಮಮತಾ ಹೇಳಿದ್ದಾರೆ.

Advertisement

ಕಲ್ಲಿದ್ದಲು ಮಾಫಿಯಾದಲ್ಲಿ ತೊಡಗಿಕೊಂಡಿದ್ದರು ಎಂದು ಆರೋಪಿಸಿ ಸಿಬಿಐ ಅಭಿಷೇಕ್ ಬ್ಯಾನರ್ಜಿ ಅವರ ಹೆಂಡತಿ ರುಜಿರಾ ಅವರನ್ನು ತನಿಖೆಗೆ ಒಳಪಡಿಸಿದ ಹಿನ್ನಲೆಯಲ್ಲಿ ಬ್ಯಾನರ್ಜಿ, ಮೋದಿ ವಿರುದ್ಧ ಈ ರೀತಿಯಲ್ಲಿ ಕಟುವಾಗಿ ಕುಟುಕಿದ್ದಾರೆ.

ನೀವು ನನ್ನನ್ನು ಕೊಲ್ಲಬಹುದು, ಹೊಡೆಯಬಹುದು, ಆದರೇ, ಒಬ್ಬ ಮಹಿಳೆಗೆ ಗೌರವವನ್ನು ನೀಡದೆ ಇರುವುದಕ್ಕೆ ಸಾಧ್ಯವಿದೆಯೇ..? ನನ್ನ ಸೊಸೆಯನ್ನು ಕಲ್ಲಿದ್ದಲು ಮಾಫಿಯಾದಲ್ಲಿ ತೊಡಗಿದ್ದಾರೆ ಎಂದು ಹೇಳುತ್ತೀರಾ..? ಆಕೆಯನ್ನು ಕಲ್ಲಿದ್ದಲು ಕಳ್ಳಿ ಎಂದು ಕರೆಯುತ್ತೀರಾ..? ಎಂದು ಮಮತಾ ಪ್ರಶ್ನಿಸಿದ್ದಾರೆ.

ನೀವು ನಿಮ್ಮ ಮಗಳು ಅಥವಾ ಅಮ್ಮನನ್ನು ಹಾಗೆ ಜರೆಯುತ್ತೀರಾ..? ನಮಗೆ ಎಲ್ಲವೂ ತಿಳಿದಿದೆ. ಆದರೇ ನಾನೇನು ಹೇಳುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಸೆಲೆಬ್ರಿಟಿಗಳಾದ ಸಯೋನಿ ದತ್ತಾ ಮತ್ತು ಜೂನ್ ಮಾಲಿಯಾ ಮತ್ತು ಕ್ರಿಕೆಟಿಗ ಮನೋಜ್ ತಿವಾರಿ ಸೇರಿದಂತೆ ಹಲವರು ತೃಣಮೂಲ ಕಾಂಗ್ರೆಸ್ ಸೇರಿಕೊಂಡು, “ಖೇಲಾ ಹೋಬೆ (ಗೇಮ್ ಆನ್)” ಘೋಷಣೆಯನ್ನು ಕೂಗಿದರು.

ದೇಶದಲ್ಲಿ ದೆವ್ವಗಳು ಆಡಳಿತ ನಡೆಸುತ್ತಿವೆ. ಅವರು ನಮ್ಮ ಬೆನ್ನು ಮೂಳೆಯನ್ನು ಮುರಿಯಲು ಪ್ರಯತ್ನಿಸುತ್ತಿದ್ದಾರೆ. ಅವರು ಬಂಗಾಳಕ್ಕೆ ನುಸುಳುತ್ತಾರೆ. ಬಂಗಾಳವನ್ನು ಹಿಡಿಯುತ್ತಾರೆ. ನಿಮಗೆ ಏನು ಬೇಕಾಗಿದೆ..? ಬಂಗಾಳ ಬಂಗಾಳವಾಗಿಯೇ ಉಳಿಯಬೇಕಾ..? ಅಥವಾ ಬಿಜೆಪಿ ಏನು ಮಾಡಿದರೂ ಅದನ್ನೇ ಒಪ್ಪಿಕೊಳ್ಳುತ್ತೀರಾ..? ಎಂದು ಮಮತಾ, ಬಿಜೆಪಿ ವಿರುದ್ಧ ಗುಡುಗಿದ್ದಾರೆ.

ಓದಿ : ಅಧಿಕಾರ ಕಳೆದುಕೊಂಡ ಕಾಂಗ್ರೆಸ್; ಪುದುಚೇರಿಯಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಕೇಂದ್ರ ಅಂಕಿತ

Advertisement

Udayavani is now on Telegram. Click here to join our channel and stay updated with the latest news.

Next