Advertisement

ಬಿಜೆಪಿ ಕಚೇರಿ ಬಾಗಿಲು ಒಡೆದ ಮಮತಾ!

11:42 PM Jun 03, 2019 | mahesh |

ಕೋಲ್ಕತಾ: ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಕಳೆದ ಮೇ 30 ರಂದು ನೈಹಾತಿಯಲ್ಲಿರುವ ಬಿಜೆಪಿ ಕಚೇರಿಯ ಬಾಗಿಲು ಒಡೆದು ಟಿಎಂಸಿ ಪಕ್ಷದ ಚಿಹ್ನೆ ಮತ್ತು ಹೆಸರನ್ನು ಬರೆದಿದ್ದಾರೆ. ಈ ಹಿಂದೆ ಈ ಕಚೇರಿ ಟಿಎಂಸಿಯದ್ದೇ ಆಗಿತ್ತು. ಆದರೆ ಬಾರಕ್‌ಪುರದಿಂದ ಟಿಎಂಸಿ ಅಭ್ಯರ್ಥಿ ದಿನೇಶ್‌ ತ್ರಿವೇದಿ ಸೋತು ಅರ್ಜುನ್‌ ಸಿಂಗ್‌ ಲೋಕಸಭೆಗೆ ಆಯ್ಕೆಯಾ ದಾಗ, ಇದು ಬಿಜೆಪಿ ಕಚೇರಿಯಾಗಿ ಬದಲಾಗಿದೆ. ಮೇ 30ರಂದು ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನವೇ ನೈಹಾತಿಯಲ್ಲಿ ಮಮತಾ ಪ್ರತಿಭಟನೆ ನಡೆಸಿದ್ದರು. ಅಂದೇ ಈ ಬಿಜೆಪಿ ಕಚೇರಿಗೆ ತೆರಳಿ ಅದರ ಬಾಗಿಲನ್ನು ತೆರೆಸಿ, ಬ್ರಶ್‌ನಿಂದ ಟಿಎಂಸಿ ಎಂದು ಬರೆದಿದ್ದಾರೆ. ಅಲ್ಲದೇ ಟಿಎಂಸಿ ಲೋಗೋವನ್ನೂ ಅವರು ಚಿತ್ರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next