ಮಲ್ಪೆ: ಪುರಾಣ ಪ್ರಸಿದ್ಧ ವಡಭಾಂಡೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸರಕಾರದ ನೆಲೆಯಲ್ಲಿ ಗರಿಷ್ಠ ಅನುದಾನ ಒದಗಿಸುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು ಎಂದು ರಾಜ್ಯ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು. ಅವರು ರವಿವಾರ ಜೀರ್ಣೋದ್ಧಾರಗೊಳ್ಳುತ್ತಿರುವ ವಡಭಾಂಡೇಶ್ವರ ಬಲರಾಮ ದೇವಸ್ಥಾನಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಅವಲೋಕಿಸಿ ಮಾತನಾಡಿದರು.
ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಮುಜರಾಯಿ ಇಲಾಖೆಗೆ ಸೇರಿದ ರಾಜ್ಯದ 34 ಸಾವಿರ ದೇವಸ್ಥಾನಗಳಲ್ಲೂ ಜ. 22ರಂದು ಪೂಜೆ ನಡೆಯಬೇಕು ಎಂದು 15 ದಿನಗಳ ಹಿಂದೆಯೇ ಆದೇಶ ನೀಡಿದ್ದೇನೆ. ರಾಜ್ಯ ಸರಕಾರವು ಸಿ ದರ್ಜೆಯ ಎಲ್ಲ ದೇವಸ್ಥಾನ ಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ.
ಗ್ರಾಮಾಂತರ ಪ್ರದೇಶದಲ್ಲಿ ಕಡಿಮೆ ಆದಾಯದ ದೇಗುಲಗಳಿಗೆ ಹೆಚ್ಚಿನ ಒತ್ತನ್ನು ನೀಡುವ ಮೂಲಕ ಅಭಿವೃದ್ಧಿ ಪಡಿಸಲು ತೀರ್ಮಾನ ಕೈಗೊಂಡಿದ್ದೇನೆ ಎಂದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಪ್ರಸಾದ್‌ರಾಜ್ ಕಾಂಚನ್, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನಾಗರಾಜ್ ಮೂಲಿಗಾರ್, ಕಾರ್ಯದರ್ಶಿ ಶಶಿಧರ ಎಂ. ಅಮೀನ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸಾಧು ಸಾಲ್ಯಾನ್, ದೇವಸ್ಥಾನದ ಪ್ರಧಾನ ತಂತ್ರಿ ವೇ|ಮೂ| ಸುಬ್ರಹ್ಮಣ್ಯ ತಂತ್ರಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ, ದೇವಸ್ಥಾನದ ಮೊಕೇ¤ಸರ ಟಿ. ಶ್ರೀನಿವಾಸ್ ಭಟ್, ಫಲಿಮಾರು ಮಠದ ಪಿಆರ್‌ಒ ಶ್ರೀಶ ಕಡೆಕಾರು, ಪ್ರಮುಖರಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ನಗರಸಭಾ ಸದಸ್ಯ ಶ್ರೀಶ ಭಟ್, ಕಿಶನ್ ಹೆಗ್ಡೆ ಕೊಳ್ಕೆಬೈಲು, ಪ್ರಖ್ಯಾತ್ ಶೆಟ್ಟಿ, ಗಣೇಶ್ ನೆರ್ಗಿ, ಮೀನಾಕ್ಷಿ ಮಾದವ, ಸಂಧ್ಯಾ ತಿಲಕ್‌ರಾಜ್, ಈಶ್ವರ್ ಜಿ. ಸಾಲ್ಯಾನ್, ಸದಾನಂದ ಸಾಲ್ಯಾನ್, ಬಾಲಕೃಷ್ಣ ಬಾದ್ಯ ಅಶೋಕ್ ಕೋಟ್ಯಾನ್, ಮಧುಚೇತನ್, ವಿನೋದ್ ಸುವರ್ಣ, ಸುಭಾಸ್ ಮೆಂಡನ್, ಶರತ್ ಬೈಲಕರೆ, ಜನಾರ್ದನ ಕೊಡವೂರು ಉಪಸ್ಥಿತರಿದ್ದರು.
ಮಾದವ ಬನ್ನಂಜೆ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ಪ್ರಕಾಶ್ ಜಿ. ಕೊಡವೂರು ನಿರೂಪಿಸಿ, ವಂದಿಸಿದರು.