ಮಲ್ಪೆ: ವಡಭಾಂಡೇಶ್ವರ ಸರ್ಕಲ್ ಬಳಿ ಕಾರೊಂದು ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಮತ್ತು ಸವಾರನನ್ನು ಹಲವು ಮೀಟರ್‌ಗಳ ವರೆಗೆ ಎಳೆದೊಯ್ದ ಅಪಘಾತದ ವೀಡಿಯೋ ಸಿ. ಸಿ. ಕೆಮರಾದಲ್ಲಿ ಸೆರೆಯಾಗಿದೆ.
Advertisement
ಸ್ಕೂಟರ್ ಸವಾರ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾನೆ. ತತ್‌ಕ್ಷಣ ಸ್ಥಳೀಯರು ಧಾವಿಸಿ ಬಂದು ಸ್ಕೂಟರ್ ಸವಾರರನ್ನು ಉಪಚರಿಸಿದ್ದಾರೆ.
ಸ್ಕೂಟರ್ ಸವಾರ ಜಂಕ್ಷನ್ ಕ್ರಾಸ್ ಮಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ರಾಜ್ಯಮಟ್ಟದ ಕ್ರಿಕೆಟ್ ಆಟಗಾರ ಪೆರ್ಡೂರಿನ ರಕ್ಷಿತ್ ಶೆಟ್ಟಿ ನಿಧನ