ಮಲ್ಪೆ: ಇಲ್ಲಿನ ಕಡಲ ತೀರದಲ್ಲಿ ಚಿನ್ನಾಭರಣಗಳು ಸಿಗುತ್ತವೆ ಎಂದು ಜನರು ದಿನವಿಡೀ ಹುಡುಕಾಟ ನಡೆಸುತ್ತಿರುವುದು ಕಂಡುಬರುತ್ತಿದೆ.
Advertisement
ಬೇಸಗೆಯಲ್ಲಿ ಪ್ರವಾಸಿಗರು ನೀರಾಟದ ವೇಳೆ ಚಿನ್ನಾಭರಣ ಸೇರಿದಂತೆ ಅಮೂಲ್ಯ ವಸ್ತುಗ ಳನ್ನು ಕಳೆದು ಕೊಳ್ಳುವುದು ಸಾಮಾನ್ಯ.ಆಭರಣ ಮರಳಿನಡಿ ಹೂತರೆ ಮತ್ತೆ ಸಿಗುವುದು ಕಷ್ಟಸಾಧ್ಯ.
ಮಳೆಗಾಲದಲ್ಲಿ ಬಿರುಸಿನಿಂದ ಗಾಳಿ ಮಳೆ ಬಂದಾಗ ಏಳುವ ಬೃಹತ್ ಅಲೆಗಳು ಮರಳ ದಂಡೆಗೆ ಆಪ್ಪಳಿಸುವುದರಿಂದ ಮರಳಿ ನಡಿಯ ಇರಬಹುದಾದ ಚಿನ್ನಾ ಭರಣಕಾಣಿಸಿಕೊಳ್ಳುತ್ತವೆ ಎನ್ನುತ್ತಾರೆ ಹುಡುಕಾಟ ನಿರತರು. ಹಾಗಾದರೆ ನಿಮಗೇನಾದರೂ ಚಿನ್ನಾಭರಣ ಸಿಕ್ಕಿದೆಯೇ ಎಂಬ ಪ್ರಶ್ನೆಗೆ ಯಾರಿಂದಲೂ ಸಕಾರಾತ್ಮಕ ಉತ್ತರ ಬರುವುದಿಲ್ಲ.