Advertisement

Malpe; ನೈಟಿಗೆ ಬೆಂಕಿ ತಗಲಿ ಮಹಿಳೆ ಸಾವು

10:51 PM Feb 14, 2024 | Team Udayavani |

ಮಲ್ಪೆ: ಕಸಕ್ಕೆ ಬೆಂಕಿಯಿಡಲು ಹೋದ ಸಂದರ್ಭದಲ್ಲಿ ನೈಟಿಗೆ ಬೆಂಕಿ ತಗಲಿ ಮಹಿಳೆಯೋರ್ವಳು ಗಂಭೀರ ಗಾಯಗೊಂಡ ಘಟನೆ ಮಲ್ಪೆ ಕೊಡವೂರಿನಲ್ಲಿ ಸಂಭವಿಸಿದೆ.

Advertisement

ಸಾರಾ ದೇವದಾಸ ಎಂಬವರು ಮಂಗಳವಾರ ಮನೆಯ ವಠಾರದ ಕಸದ ರಾಶಿಗೆ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಲು ಮುಂದಾಗಿದ್ದರು. ಈ ಸಂದರ್ಭ ನೈಟಿಗೆ ಬೆಂಕಿ ತಾಗಿ ಗಂಭೀರವಾಗಿ ಗಾಯಗೊಂಡಿದ್ದರು.

ಮನೆಯವರು ಹೊರಗೆ ಬಂದು ಬೆಂಕಿ ಆರಿಸಿದರೂ ಸಾರಾ ಅವರ ದೇಹ ಬಹುತೇಕ ಸುಟ್ಟು ಹೋಗಿತ್ತು. ತತ್‌ಕ್ಷಣ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next