Advertisement

Malpe ಮೀನುಗಾರಿಕಾ ಬೋಟ್‌ ಮುಳುಗಡೆ: ಏಳು ಮಂದಿ ಮೀನುಗಾರರ ರಕ್ಷಣೆ

10:16 PM Feb 17, 2024 | Team Udayavani |

ಮಲ್ಪೆ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ ಆಳಸಮುದ್ರ ದೋಣಿ ಮಹಾರಾಷ್ಟ್ರದ ರತ್ನಾಗಿರಿಯಲ್ಲಿ ಮುಳುಗಡೆಗೊಂಡಿದ್ದು ಅದರಲ್ಲಿದ್ದ 7 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.

Advertisement

ಜ. 24ರಂದು ರಾತ್ರಿ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಪ್ರಕಾಶ್‌ ದೇವಾಡಿಗ ಅವರಿಗೆ ಸೇರಿದ ಆನಂತಕೃಷ್ಣ ಬೋಟು ಜ. 31ರ ರಾತ್ರಿ 9.30ರ ವೇಳೆಗೆ ರತ್ನಾಗಿರಿ ಸಮೀಪ ಮೀನುಗಾರಿಕೆ ನಡೆಸುತ್ತಿರುವಾಗ ಬೋಟಿನ ಒಳಗೆ ನೀರು ಬರಲಾರಂಭಿಸಿತು.

ತತ್‌ಕ್ಷಣ ಸಮೀಪದಲ್ಲಿದ್ದ ಮೀನಾಕ್ಷಿ ಮತ್ತು ಗಾಯತ್ರಿ ರಕ್ಷಾ ಬೋಟಿನವರು ಈ ಬೋಟಿನಲ್ಲಿದ್ದ 7 ಮಂದಿಯನ್ನು ರಕ್ಷಿಸಿದರು. ಬೋಟನ್ನು ಮಾತ್ರ ರಕ್ಷಣೆ ಮಾಡಲು ಸಾಧ್ಯವಾಗದೆ ಮುಳುಗಡೆಗೊಂಡಿತು. 6 ಲಕ್ಷ ರೂ. ಮೌಲ್ಯದ ಮೀನು, ಬಲೆ, ಡಿಸೇಲ್‌ ಸೇರಿದಂತೆ ಸುಮಾರು 60 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next