Advertisement
ರೇಷ್ಮಾ ಖಾರ್ವಿ ಅವರಿಗೆ ಸೇರಿದ ಶ್ರೀ ಸ್ವರ್ಣರಾಜ್ ಬೋಟು ಮುಳುಗಡೆಯಾಗಿದ್ದು, ಮೇ 14ರಂದು ರಾತ್ರಿ 10-30ಕ್ಕೆ ಮಲ್ಪೆ ಬಂದರಿನಿಂದ ಮೀನುಗಾರಿಕೆ ತೆರಳಿತ್ತು. ಮೀನುಗಾರಿಕೆ ಮುಗಿಸಿ ಮೇ 19ರಂದು ವಾಪಸು ಮಲ್ಪೆ ಬಂದರಿಗೆ ಬರುವಾಗ ತಡರಾತ್ರಿ 1ಗಂಟೆ ವೇಳೆ ಮಲ್ಪೆ ಬಂದರಿಗೆ ಸುಮಾರು 6ಮಾರು ಆಳ ದೂರದಲ್ಲಿ ಬೋಟಿನ ಸ್ಟೇರಿಂಗ್ ತುಂಡಾಗಿ, ಗಾಳಿಯ ರಭಸಕ್ಕೆ ಬೋಟ್ ನಿಯಂತ್ರಿಸಲು ಸಾಧ್ಯವಾಗದೇ ಸಮೀಪದಲ್ಲಿದ್ದ ತೆಲ್‌ಕಲ್ ಬಂಡೆಗೆ ಬಡಿಯಿತು. ಪರಿಣಾಮ ಬೋಟ್ ಹಾನಿಯಾಗಿ ನೀರು ಒಳ ಹೊಕ್ಕು ಮುಳುಗಲು ಪ್ರಾರಂಭಿಸಿತು. ತತ್‌ಕ್ಷಣ ಸಮೀಪದಲ್ಲಿದ್ದ ಪಂಡರೀತೀರ್ಥ ದೋಣಿಯವರು ಧಾವಿಸಿ ಬಂದು ಬೋಟಿನಲ್ಲಿದ್ದ 6ಮಂದಿ ಮೀನುಗಾರರನ್ನು ರಕ್ಷಿಸಿ ದಡ ಸೇರಿಸಿದ್ದಾರೆ. ಮುಳುಗಡೆಯಾಗುತ್ತಿದ್ದ ಬೋಟನ್ನು ಶ್ರೀಚರಣ ಬೋಟ್ ಮೂಲಕ ರಕ್ಷಿಸಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ.
Advertisement
ಮಲ್ಪೆ: ಮೀನುಗಾರಿಕಾ ಬೋಟ್ ಮುಳುಗಡೆ, 6ಮಂದಿ ಮೀನುಗಾರರ ರಕ್ಷಣೆ
06:40 PM May 19, 2020 | sudhir |
Advertisement
Udayavani is now on Telegram. Click here to join our channel and stay updated with the latest news.