Advertisement

Malpe: ಬೋಟಿನಿಂದ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆ

07:55 PM Dec 27, 2024 | Team Udayavani |

ಮಲ್ಪೆ: ಮಲ್ಪೆ ಮೀನುಗಾರಿಕೆ ಬಂದರಿನಿಂದ ಮೀನುಗಾರಿಕೆ ತೆರಳಿದ್ದ ಮೀನುಗಾರ ಸಮುದ್ರಕ್ಕೆ ಬಿದ್ದು ನಾಪತ್ತೆಯಾದ ಘಟನೆ ನಡೆದಿದೆ.

Advertisement

ಅಂಕೋಲಾ ತಾಲೂಕಿನ ಅಣ್ಣಕೃಷ್ಣ ತಿಮ್ಮಪ್ಪ (48) ನಾಪತ್ತೆಯಾದವರು. ಅವರು ಡಿ. 25ರಂದು ಬೆಳಗ್ಗಿನ ಜಾವ ಅರಬಿ ಸಮುದ್ರದಲ್ಲಿ 13 ನಾಟಿಕಲ್‌ ಮೈಲು ದೂರದಲ್ಲಿ ಮೀನುಗಾರಿಕೆ ಕೆಲಸ ಮಾಡುತ್ತಿರುವಾಗ ಆಯತಪ್ಪಿ ಬೋಟಿನಿಂದ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು. ತತ್‌ಕ್ಷಣ ಜತೆಯಲ್ಲಿದ್ದವರು ಹುಡುಕಾಡಿದರೂ ಪತ್ತೆಯಾಗಲಿಲ್ಲ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next