Advertisement

Malpe: ಕಾಲುಜಾರಿ ನೀರಿಗೆ ಬಿದ್ದು ಮೀನುಗಾರ ಸಾವು

11:33 PM Feb 21, 2024 | Team Udayavani |

ಮಲ್ಪೆ: ಲಂಗರು ಹಾಕಿದ ಬೋಟ್‌ನಲ್ಲಿ ಮಲಗಿದ್ದ ಮೀನುಗಾರರೊಬ್ಬರು ಕಾಲುಜಾರಿ ಸಮುದ್ರಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ನಡೆದಿದೆ.

Advertisement

ಮೃತಪಟ್ಟವರನ್ನು ತಮಿಳುನಾಡು ರಾಮನಾಥಪುರಂ ಮೂಲದ ಕಮೇಂಗ (52) ಎಂದು ಗುರುತಿಸಲಾಗಿದೆ. ಅವರು ಮಲ್ಪೆಯಲ್ಲಿ ಕೊತ್ವಾಲ್‌ಕಿಂಗ್‌ ಬೋಟಿನಲ್ಲಿ ಕೆಲಸ ಮಾಡಿಕೊಂಡಿದ್ದರು.

ಫೆ. 19ರಂದು ರಾತ್ರಿ ಬೋಟಿನಲ್ಲಿ ಮಲಗಿದ್ದ ಅವರು ಏಕಾಏಕಿ ಕಾಣೆಯಾಗಿದ್ದರು. ಮರುದಿನ ಬೆಳಗ್ಗೆ ಮುಳುಗು ತಜ್ಞ ಈಶ್ವರ ಮಲ್ಪೆ ಅವರು ನೀರಿನಲ್ಲಿ ತೇಲುತ್ತಿದ್ದ ಕಮೇಂಗ ಅವರ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next