Advertisement

ಮಲ್ಪೆ : ಮಕ್ಕಳ ಅಪಹರಣ ಯತ್ನ ವದಂತಿ; ಪೊಲೀಸರಿಂದ ಪರಿಶೀಲನೆ

12:23 AM Jul 27, 2022 | Team Udayavani |

ಮಲ್ಪೆ : ಮಲ್ಪೆ ಹಾಗೂ ಸುತ್ತಮುತ್ತ ಪ್ರದೇಶದಲ್ಲಿ ಮಕ್ಕಳ ಅಪಹರಣಕ್ಕೆ ಯತ್ನ ನಡೆದಿದೆ ಎಂಬ ವದಂತಿ ಹರಡಿದ್ದು, ಇದರಿಂದ ಜನರು ಆತಂಕಗೊಂಡಿದ್ದಾರೆ.

Advertisement

ಮಲ್ಪೆ ವಡಭಾಂಡೇಶ್ವರ ಸಮೀಪ ರಸ್ತೆಯಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಜು. 21ರಂದು ಶಾಲೆಯ ವಾಹನಕ್ಕಾಗಿ ರಸ್ತೆ ಬದಿ ಕಾಯುತ್ತಿದ್ದ ಬಾಲಕಿಗೆ ಆಮ್ನಿ ಕಾರಿನಲ್ಲಿ ಬಂದ ಮೂವರು ಚಾಕ್ಲೇಟ್‌ ತೋರಿಸಿ ಅಪಹರಣಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂದರ್ಭದಲ್ಲಿ ಬಾಲಕಿ ಬೊಬ್ಬೆ ಹಾಕಿದ್ದಾಳೆ. ಅಷ್ಟರಲ್ಲಿ ಅಪಹರಣಕಾರರು ಕಾರು ಚಲಾಯಿಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಮಲ್ಪೆ ಪೊಲೀಸರು ಸ್ಥಳೀಯರು ನೀಡಿದ ಮಾಹಿತಿಯ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಆಸುಪಾಸಿನಲ್ಲಿರುವ ಸಿಸಿ ಕೆಮರಾವನ್ನು ಪರಿಶೀಲನೆ ನಡೆಸಿದ್ದಾರೆ. ಮಕ್ಕಳ ಅಪಹರಣದ ಕುರಿತು ವಾಟ್ಸ್‌ಆ್ಯಪ್‌ನಲ್ಲಿ ಮಾಹಿತಿ ಹರಿದಾಡಿದ್ದು, ಪೋಷಕರು ಭಯಭೀತರಾಗಿದ್ದಾರೆ.

ಬಾಲಕಿ ಹೇಳಿದ ಜಾಗ, ಸಮಯ, ಆಕೆ ನಡೆದುಕೊಂಡು ಹೋದ ಜಾಗವನ್ನು ಸಿಸಿ ಕೆಮರಾದಲ್ಲಿ ಪರಿಶೀಲನೆ ನಡೆಸಿದ್ದೇವೆ. ಆ ಸಮಯದಲ್ಲಿ ಯಾವುದೇ ವಾಹನ ಅಲ್ಲಿ ನಿಂತಿರಲಿಲ್ಲ. ಆ ಮಗು ಯಾವುದೋ ಕಾರಣಕ್ಕೆ ಹೆದರಿ ಹೇಳಿರಬೇಕು. ಜನರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಮಲ್ಪೆ ಪೊಲೀಸ್‌ ಠಾಣಾಧಿಕಾರಿ ಶಕ್ತಿವೇಲು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next