ಮಲ್ಪೆ: ಮಲ್ಪೆ ಬಂದರಿನ ಒಳಗೆ ಕಾಲು ಜಾರಿ ಮೀನುಗಾರರೊಬ್ಬರು ನೀರಿನಲ್ಲಿ ಮೃತಪಟ್ಟ ಘಟನೆ ರವಿವಾರ ಬೆಳಗ್ಗೆ ನಡೆದಿದೆ.
Advertisement
ಮೃತರನ್ನು ಕಟಪಾಡಿ ಮಟ್ಟು ನಿವಾಸಿ ಸಂತೋಷ್ ತಿಂಗಳಾಯ (35) ಎಂದು ಗುರುತಿಸಲಾಗಿದೆ. ಅವರು ಜೈ ಬಲರಾಮ್ ಆಳಸಮುದ್ರ ಬೋಟಿನಲ್ಲಿ ಮೀನುಗಾರಿಕೆ ಮಾಡುತ್ತಿದ್ದರು.
ರವಿವಾರ ಸಂಜೆ ಮೀನುಗಾರಿಕೆಗೆ ತೆರಳಲು ಬೋಟನ್ನು ಹಿಂದೆ ಚಲಾಯಿಸುತ್ತಿದ್ದ ವೇಳೆಯಲ್ಲಿ ಕಾಲುಜಾರಿ ನೀರಿಗೆ ಬಿದ್ದರೆನ್ನಲಾಗಿದೆ.
ಹೂಳಿನೊಳಗೆ ಸಿಲುಕಿಕೊಂಡ ಅವರನ್ನು ತತ್‌ಕ್ಷಣ ಮೇಲೆತ್ತಿಆಸ್ಪತ್ರೆಗೆ ದಾಖಲಿಸಿದ್ದರೂ ಆದಾಗಲೇ ಅವರು ಮೃತಪಟ್ಟಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.