Advertisement

ಮಲೆನಾಡು ಕರ್ನಾಟಕ ಘೋಷಣೆ ಮಾಡಿ: ಎಚ್‌.ಕೆ. ಕುಮಾರಸ್ವಾಮಿ

12:40 AM Mar 26, 2022 | Team Udayavani |

ವಿಧಾನಸಭೆ: ಮಲೆನಾಡು ಪ್ರದೇಶ ಹೊಂದಿರುವ ಜಿಲ್ಲೆಗಳನ್ನು ಒಟ್ಟುಗೂಡಿಸಿ ಅಭಿವೃದ್ಧಿ ದೃಷ್ಟಿಯಿಂದ ಮಲೆನಾಡು ಕರ್ನಾಟಕ ಎಂದು ಘೋಷಣೆ ಮಾಡಬೇಕೆಂದು ಜೆಡಿಎಸ್‌ ಶಾಸಕ ಎಚ್‌.ಕೆ. ಕುಮಾರಸ್ವಾಮಿ ಮನವಿ ಮಾಡಿದರು.

Advertisement

ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಶುಕ್ರವಾರ ಮಾತನಾಡಿದ ಅವರು, ಮಲೆನಾಡು ಪ್ರದೇಶದ ಜಿಲ್ಲೆಗಳಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅಭಿವೃದ್ಧಿ ದೃಷ್ಟಿಯಿಂದ ಕಿತ್ತೂರು ಕರ್ನಾಟಕ ಘೋಷಣೆ ಮಾಡಿದಂತೆ ಮಲೆನಾಡು ಕರ್ನಾಟಕ ಘೋಷಣೆ ಮಾಡಿ, ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದರು. ಅನುದಾನದ ಹಂಚಿಕೆಯಲ್ಲಿ ಸಾಕಷ್ಟು ತಾರತಮ್ಯವಾಗುತ್ತಿದೆ. ಜನಸಂಖ್ಯೆ ಆಧಾರದ ಮೇಲೆ ಅನುದಾನ ನೀಡುವ ವವ್ಯಸ್ಥೆ ಆಗಬೇಕು. ಉಡುಪಿ, ದಕ್ಷಿಣ ಕನ್ನಡದಲ್ಲಿ ಜನಸಂಖ್ಯೆ ಕಡಿಮೆ ಇದ್ದರೂ, ಅಲ್ಲಿಗೆ 30 ಕೋಟಿ ರೂ. ನೀಡುತ್ತಾರೆ. ನಮಗೆ 2 ಕೋಟಿ ಕೊಡುತ್ತಾರೆ. ಈ ತಾರತಮ್ಯ ನಿಲ್ಲಬೇಕು. ಇಲ್ಲದಿದ್ದರೇ ಕಾನೂನು ಮೆಟ್ಟಿಲು ಹತ್ತಬೇಕಾಗುತ್ತದೆ ಎಂದರು.

ಆಡಳಿತದಲ್ಲಿ ಸುಧಾರಣೆ ತರುವ ಕೆಲಸ ಮಾಡಬೇಕು.ತಹಸೀಲ್ದಾರ್‌ ಹುದ್ದೆಯನ್ನು ಮೇಲ್ದರ್ಜೆಗೇರಿಸಿ ಎಸಿ ಹುದ್ದೆ ನೀಡಿ, ಡಿಸಿ ವರದಿ ಕೊಟ್ಟ ಮೇಲೆ ಸರ್ಕಾದಲ್ಲಿ ಮತ್ತೆ ಏಕೆ ಪರಿಶೀಲನೆ ಮಾಡಬೇಕು. ಗ್ರಾಮ ಪಂಚಾಯತಿಗಳಲ್ಲಿ ಪಿಡಿಒ ಮತ್ತು ಸೆಕ್ರೆಟರಿಗಳು ಇಬ್ಬರೂ ಯಾಕೆ ಬೇಕು. ಅವರು ಒಬ್ಬರಿಗೊಬ್ಬರು ಹೊಡೆದಾಡುತ್ತಿದ್ದಾರೆ. ಅನಗತ್ಯ ಹುದ್ದೆಗಳನ್ನು ಕಡಿತ ಮಾಡಿ, ಅರಣ್ಯ ಇಲಾಖೆ ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಿ, ಯುರೋಪಿಯನ್‌ ದೇಶಗಳು ಪ್ರವಾಸೋದ್ಯಮದಿಂದಲೇ ದೇಶವನ್ನು ನಡೆಸುತ್ತಿವೆ. ಪಶ್ಚಿಮ ಘಟ್ಟದಲ್ಲಿಯೂ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶ ಇದೆ ಎಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next