Advertisement

ಗಡಿಪಾರು ಆದೇಶದ ವಿರುದ್ಧ ಮೇಲ್ಮನವಿಗೆ ಮಲ್ಯ ನಿರ್ಧಾರ

12:30 AM Feb 06, 2019 | |

ಲಂಡನ್‌: ಭಾರತಕ್ಕೆ ಗಡಿಪಾರು ಮಾಡಲು ಇಂಗ್ಲೆಂಡ್‌ ಸರಕಾರ ನೀಡಿದ ಅನುಮೋದನೆ ವಿರುದ್ಧ ಮೇಲ್ಮನವಿ ಸಲ್ಲಿಸಲು ಉದ್ಯಮಿ ವಿಜಯ್‌ ಮಲ್ಯ ನಿರ್ಧರಿಸಿದ್ದಾರೆ. ಭಾನುವಾರವಷ್ಟೇ ಇಂಗ್ಲೆಂಡ್‌ ಗೃಹ ಕಾರ್ಯದರ್ಶಿ ಸಾಜಿದ್‌ ಜಾವೀದ್‌ ಈ ನಿರ್ಧಾರ ಪ್ರಕಟಿಸಿದ್ದರು. ಜಾವಿದ್‌ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಲು ಮಲ್ಯಗೆ ಎರಡು ವಾರಗಳ ಕಾಲಾವಕಾಶ ಇದೆ. ಜಾವಿದ್‌ ನಿರ್ಧಾರ ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಹೇಳಿಕೆ ನೀಡಿದ ಮಲ್ಯ, ಇನ್ನು ಮೇಲ್ಮನವಿ ಸಲ್ಲಿಕೆ ಪ್ರಕ್ರಿಯೆಯನ್ನು ಆರಂಭಿಸುವುದಾಗಿ ಹೇಳಿದ್ದರು.

Advertisement

ಮೇಲ್ಮನವಿಯನ್ನು ಮಲ್ಯ ಸಲ್ಲಿಸುತ್ತಿದ್ದಂತೆಯೇ, ಅರ್ಜಿಯನ್ನು ಸಮ್ಮತಿಸಬೇಕೆ ಎಂದು ಹೈಕೋರ್ಟ್‌ ಪರಿಶೀಲಿಸಲಿದೆ. ಅರ್ಜಿಯನ್ನು ಸಮ್ಮತಿಸಿದರೆ ಮತ್ತೂಂದು ಸುತ್ತಿನ ವಿಚಾರಣೆ ನಡೆದು ಪ್ರಕರಣ ಮುಕ್ತಾಯ ಕಾಣಲು ಹಲವು ತಿಂಗಳುಗಳೇ ಬೇಕಾಗುತ್ತವೆ. ಪರಿಣಿತರ ಪ್ರಕಾರ, ಈ ಪ್ರಕ್ರಿಯೆ ಆರಂಭವಾಗಲು ಐದರಿಂದ ಆರು ತಿಂಗಳುಗಳ ಕಾಲ ಬೇಕಾಗಬಹುದು. ತ್ವರಿತ ವಿಚಾರಣೆಗೆ ಭಾರತ ಸರಕಾರ ಮನವಿ ಮಾಡಬಹುದಾದರೂ, ಇದನ್ನು ಸಮ್ಮತಿಸುವ ಸಾಧ್ಯತೆ ಕಡಿಮೆ ಇರುತ್ತದೆ. ಹೈಕೋರ್ಟ್‌ನಲ್ಲಿ ಬಂದ ತೀರ್ಪಿನ ಆಧಾರದಲ್ಲಿ ಮತ್ತೆ ಸುಪ್ರೀಂಕೋರ್ಟ್‌ಗೆ ಹೋಗುವ ಅವಕಾಶವೂ ಎರಡೂ ಪಕ್ಷಗಳಿಗೆ ಇರುತ್ತದೆ. ಈ ಪ್ರಕ್ರಿಯೆ ಮತ್ತೆ ಒಂದರಿಂದ ಎರಡು ತಿಂಗಳುಗಳವರೆಗೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next