Advertisement

ED Abuse: ಕೇಂದ್ರಕ್ಕೆ ಪಂಚರಾಜ್ಯ ಚುನಾವಣೆ ಫಲಿತಾಂಶ ಉತ್ತರ ನೀಡಲಿದೆ: ಖರ್ಗೆ

03:15 PM Oct 28, 2023 | Team Udayavani |

ಕಲಬುರಗಿ: ಚುನಾವಣೆ ಘೋಷಣೆಯಾಗಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿರುವ ಹೊತ್ತಿನಲ್ಲಿ ಕೇಂದ್ರ ಸರ್ಕಾರವು ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷರ ಹಾಗೂ ಮುಖ್ಯಮಂತ್ರಿ ಪುತ್ರನ‌ ಮನೆ ಮೇಲೆ ಇಡಿ ದಾಳಿ ನಡೆಸುತ್ತಿರುವುದಕ್ಕೆ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶವೇ ಉತ್ತರ ನೀಡಲಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷರು ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Advertisement

ನವದೆಹಲಿಯಿಂದ ಇಲ್ಲಿಗೆ ಆಗಮಿಸಿದ ಅವರು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಚುನಾವಣೆ ಸಮಯದಲ್ಲಿ ಇಡಿ ದಾಳಿ ಮಾಡಿರುವ ತಪ್ಪಿನ ಅರಿವು ಚುನಾವಣಾ ಫಲಿತಾಂಶ ನಂತರ ಕೇಂದ್ರ ಸಕ್ಕಾರಕ್ಕಾಗಲಿದೆ ಎಂದರು.

ಕಾಂಗ್ರೆಸ್ ಪಕ್ಷ ಇಡಿ ಹಾಗೂ ಐಟಿ ಸೇರಿ ಇತರ ಯಾವುದೇ ದಾಳಿಗಳಿಗೆ ಹೆದರುವುದಿಲ್ಲ.‌ ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವ ನೆಲೆಗಟ್ಟಿನ ಹಾಗೂ ನೈತಿಕ ಮೌಲ್ಯಗಳ ಆಧಾರದ ಮೇಲೆ ರಾಜಕಾರಣ ಮಾಡುತ್ತದೆ.‌ ಪ್ರಜಾಸತ್ತಾತ್ಮಕ ನೆಲೆ ಆಧಾರದ ಮೇಲೆ ಪಕ್ಷ ಚುನಾವಣೆ ಎದುರಿಸಲಿದೆ. ಯಾವುದೇ ದಾಳಿ ಮತ್ತು ಅಸ್ತ್ರಗಳಿಗೆ ಕಾಂಗ್ರೆಸ್ ಹೆದೆರುವುದಿಲ್ಲ ಎಂದರಲ್ಲದೇ ಚುನಾವಣಾ ಫಲಿತಾಂಶ ನಂತರ ಕೇಂದ್ರ ಸರ್ಕಾರಕ್ಕೆ ತಪ್ಪಿನ ಅರಿವಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.‌

ಪಂಚರಾಜ್ಯಗಳ ಚುನಾವಣೆಯಲ್ಲೂ ಕಾಂಗ್ರೆಸ್ ಗೆ ಉತ್ತಮ ವಾತಾವರಣವಿದೆ. ಈಗಾಗಲೇ ಒಂದು ಹಂತದ ಪ್ರಚಾರ ಕೈಗೊಳ್ಳಲಾಗಿಸೆ. ಎಲ್ಲ ಕಡೆ ಉತ್ತಮ ವಾತಾವರಣ ಕಂಡಿದೆ.‌ ಅನೇಕ ಸವಾಲಿನ ನಡುವೆ ಈ ಹಿಂದೆ ಅನೇಕ ಚುನಾವಣೆಯಲ್ಲಿ ಗೆಲುವು ಸಾಧಿಸಲಾಗಿದೆ. ಈಗಲೂ ಅಂತಹ ಸಾಧನೆ ತೋರುವ ವಿಶ್ವಾಸವಿದೆ ಎಂದರು.

ಸವಾಲಿನ ನಡುವೆ ತಾವು ಎಐಸಿಸಿ ಅಧ್ಯಕ್ಷರಾಗಿ ಒಂದು ವರ್ಷ ಯಶಸ್ವಿಯಾಗಿ ನಿಭಾಯಿಸಲಾಗಿದೆ ಎಂದು ಮಾಧ್ಯಮಗಳೇ ವರದಿ ಮಾಡಿವೆ. ತಮ್ಮ ರಾಜಕೀಯ ಜೀವನುದ್ದಕ್ಕೂ ತಮಗೆ ವಹಿಸಿಕೊಟ್ಟ ಸಚಿವ ಸ್ಥಾನ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ, ವಿಪಕ್ಷ ನಾಯಕ ಸೇರಿದಂತೆ ಹಲವು ಜವಾಬ್ದಾರಿ ಗಳನ್ನು ಸವಾಲುಗಳನ್ನು ಎದುರಿಸಿಯೇ ನಿಭಾಯಿಸಲಾಗಿದೆ ಎಂದು ಡಾ. ಖರ್ಗೆ ವಿವರಣೆ ನೀಡಿದರು.

Advertisement

ಇದನ್ನೂ ಓದಿ: Kasturirangan ವರದಿ ವಿರೋಧ ಜಾಥಾ; ಲಕ್ಷ ಕುಟುಂಬದಿಂದ ಆಕ್ಷೇಪಣೆಗೆ ಪೂರ್ಣ ಸಿದ್ಧತೆ

Advertisement

Udayavani is now on Telegram. Click here to join our channel and stay updated with the latest news.

Next