Advertisement

ಸರ್ವಾಧಿಕಾರಿ ಧೋರಣೆಗೆ ಜನರ ನಿರ್ಲಕ್ಷ್ಯ

09:20 AM May 07, 2023 | Team Udayavani |

ಬಾಗಲಕೋಟೆ: ನವನಗರದ ವಾಂಬೆ ಕಾಲೋನಿಯಲ್ಲಿ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಚರಂತಿಮಠ ಅವರನ್ನು ಮೆರವಣಿಗೆ ಮಾಡಿ ಪುಷ್ಪ ಸುರಿಮಳೆಗೈದು ಜನರು ಕಾಲೋನಿಗೆ ಅದ್ಧೂರಿಯಾಗಿ ಸ್ವಾಗತಿಸಿ ಬೆಂಬಲ ಸೂಚಿಸಿದರು.

Advertisement

ಈ ವೇಳೆ ಸಂತೋಷ ಹೊಕ್ರಾಣಿ ಮಾತನಾಡಿ, ಜನರು ಸರ್ವಾಧಿಕಾರ ದೋರಣೆಯ ರಾಜಕೀಯ ಬೇಡ ಎಂದು
ಹೇಳುತ್ತಿದ್ದು, ಅಭಿವೃದ್ಧಿಯ ಹರಿಕಾರರನ್ನು ಕ್ಷೇತ್ರಕ್ಕೆ ತರುವುದಕ್ಕಾಗಿ ಪಣ ತೊಟ್ಟಿದ್ದಾರೆ. ಹೀಗಾಗಿ ಎಲ್ಲಡೆ ಆಟೋರಿಕ್ಷಾ ಚಿನ್ಹೆಗೆ ಬೆಂಬಲ ತೋರುತ್ತಿದ್ದು, ಈ ಬಾರಿ ಕ್ಷೇತ್ರದಲ್ಲಿ ಬದಲಾವಣೆಯಾಗಲಿದೆ ಎಂದು ವಿಶ್ವಾಸ
ವ್ಯಕ್ತಪಡಿಸಿದರು.

ಮಲ್ಲಿಕಾರ್ಜುನ ಚರಂತಿಮಠ ಅವರು ಕಳೆದ 20 ವರ್ಷಕ್ಕೂ ಅಧಿಕ ವರ್ಷಗಳಿಂದ ಸಂಘ ಪರಿವಾರದಲ್ಲಿ
ಕಾರ್ಯಕರ್ತನಾಗಿ ಸೇವೆ ಸಲ್ಲಿದ್ದು, ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಇಂತಹ ಮಹಾನ್‌
ವ್ಯಕ್ತಿ ಇಂದು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ಜನರ ಮೇಲೆ ಹಾಗೂ ಪಕ್ಷದ ಕಾರ್ಯಕರ್ತರ ಮೇಲೆ ನಡೆಯುತ್ತಿರುವ
ಧೋರಣೆಯಿಂದ ಬೇಸತ್ತಿದ್ದಾರೆ. ಇದೆಲ್ಲವನ್ನು ಮನಗಂಡು ಇದರಿಂದ ಮುಕ್ತವಾಗಿ ಹೊರಬರುವಂತೆ ಮಾಡಬೇಕಿದೆ.

ಹಾಗಾಗಿ ಬಾಗಲಕೋಟೆಯನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸಲು ಪಣತೊಟ್ಟಿರುವ ಸ್ವಾಭಿಮಾನಿ ಕಾರ್ಯಕರ್ತ,
ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಚರಂತಿಮಠ ಅವರಿಗೆ ಆರಿಸಿ ತರಬೇಕು ಎಂದರು.

ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಚರಂತಿಮಠ ಮಾತನಾಡಿ, ಅರ್ಹತೆ ಇಲ್ಲದ ನಾಯಕನ್ನು ಬಾಗಲಕೋಟೆ
ಕ್ಷೇತ್ರದಿಂದ ಮೂರು ಬಾರಿ ಶಾಸಕನಾಗಿ ಆಯ್ಕೆ ಮಾಡಿ ತರುವ ಮೂಲಕ ಜನರು ನಾಯಕನ ಪಟ್ಟ ಕೊಟ್ಟಿದ್ದರೂ,
ಕ್ಷೇತ್ರದ ಜನರಿಗೆ ಹಾಗೂ ಸಂಘಟನೆಯ ಕಾರ್ಯಕರ್ತರಿಗೆ ಸ್ಪಂದಿಸುವ ಕೆಲಸ ಮಾಡಿಲ್ಲ. ಎಲ್ಲರ ಮೇಲೂದಬ್ಬಾಳಿಕೆ ಮಾಡುತ್ತಾ, ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಜನರು ಭಯದಲ್ಲಿಯೇ ಬದುಕುತ್ತಿದ್ದಾರೆ. ಇದೆಲ್ಲವನ್ನು ಮನಗಂಡಿರುವ ಕ್ಷೇತ್ರದ ಮತದಾರರು ಈ ಬಾರಿ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ ಎಂದರು.

Advertisement

ಮುಖಂಡರಾದ ಬಸವರಾಜ ಕಟಗೇರಿ, ರವಿ ಕುಮಟಗಿ, ಅಶೋಕ ಮುತ್ತಿನಮಠ, ಅಶೋಕ ಮಹೇಂದ್ರಕರ, ನಾಗರಾಜ ಕೆರೂರ, ಸಚಿನ ಮರಿಶೆಟ್ಟಿ, ಸಂಜೀವ ಡಿಗ್ಗಿ, ಶ್ರೀಶೈಲ ಅಂಗಡಿ, ರಾಜು ಗೌಳಿ, ಅರುಣ ಲೋಕಾಪುರ, ಶಂಕರ ಮಗಜಿ, ವಿಶಾಲ ಮಾಂಡಗಿ, ಮುತ್ತು ಸಜ್ಜನ, ಅಶೋಕ ಸಾಳಿಂಕೆ, ವಿಜಯ ಮನಗೂಳಿ, ಶಂಕ್ರಯ್ಯ ಹಂಚಿನಮಠ, ವಿರೇಶ ಹಿರೇಮಠ, ಚರಣ ಜಾಧವ, ವಿಠuಲ ಕಾಳಬರ, ಈರಣ್ಣ ವಿಜಯಪುರ,ಹನಮಂತ ಕರಾಡೆ, ನಾಗರಾಜ ಕಾಂಬಳೆ, ಶಾಂತಾಬಾಯಿ ಗೋಣಿ, ವಿಜಲಕ್ಷಿ¾ ಅಂಗಡಿ, ಗಂಗಮ್ಮ ರಜಪೂತ, ಉಮಾಗವಿಮಠ, ಸುಭದ್ರಾ ದಶಮನಿ, ಸಂಗಮ್ಮ ನಾಶಿ, ರೇಖಾ ಮುರಡಿ ಮುಂತಾದವರು ಪಾಲ್ಗೊಂಡಿದ್ದರು.

ಸ್ವಾಭಿಮಾನಿ ಬಳಗಕ್ಕೆ ಕಮತಗಿ ಯುವಕರು: ಬಾಗಲಕೋಟೆ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ
ಚರಂತಿಮಠ ಅವರ ನೇತೃತ್ವದಲ್ಲಿ ಕಮತಗಿಯ ಬಸವರಾಜ ಅಚನೂರ, ಕಾಶಿನಾಥ ಗೋರಕಲ್‌, ಪರಶು ಪಟ್ಟದ, ಆನಂದ ಬಂದಿಕೇರಿ ಸೇರಿದಂತೆ ಮುಂತಾದವರು ಸ್ವಾಭಿಮಾನಿ ಬಳಗಕ್ಕೆ ಸೇರ್ಪಡೆಯಾದರು. ಮಂಜುನಾಥ ಮೆಳ್ಳಿ, ರಮೇಶ ಹಿರಾಳ, ಶಿವಾನಂದ ಹೊಸಮನಿ, ಸಂತೋಷ ಜಾಲಿಹಾಳ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next