Advertisement

ನಟ ರಾತ್ರಿ ಮನೆಗೆ ಕರೆದರೂ ಹೋಗಬೇಕು,ಇಲ್ಲದಿದ್ರೆ..ಕರಾಳ ಅನುಭವ ಬಿಚ್ಚಿಟ್ಟ ಶೆರಾವತ್‌

03:49 PM Aug 02, 2022 | Team Udayavani |

ಮುಂಬಯಿ: ಬಾಲಿವುಡ್‌ ನಲ್ಲಿ ತನ್ನ ಗ್ಲಾಮರಸ್‌ ಪಾತ್ರಗಳಿಂದ ಪಡ್ಡೆ ಹುಡುಗರ ನಿದ್ದೆಗೆಡಿಸಿದ ನಟಿ ಮಲ್ಲಿಕಾ ಶೆರಾವತ್‌ ಸಿನಿಮಾರಂಗದಲ್ಲಿನ ತಮ್ಮ ಕರಾಳ ಅನುಭವದ ಬಗ್ಗೆ ಮುಕ್ತವಾಗಿ ಮಾತಾನಾಡಿದ್ದಾರೆ.

Advertisement

‘ಮರ್ಡರ್‌ʼ ಸಿನಿಮಾದಲ್ಲಿನ ತಮ್ಮ ಪಾತ್ರದಿಂದ ಬಾಲಿವುಡ್‌ ನಲ್ಲಿ ಗುರುತಿಸಿಕೊಂಡ ಮಲ್ಲಿಕಾ, ಆ ಬಳಿಕ ಗ್ಲಾಮರಸ್‌ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡರು. ಅವರ ಜನಪ್ರಿಯತೆಯಿಂದ ಅವರು ಹಾಲಿವುಡ್‌ ಸಿನಿಮಾದಲ್ಲೂ ಕಾಣಿಸಿಕೊಂಡರು.

ಮಲ್ಲಿಕಾ ಶೆರಾವತ್‌ ನಟನೆಯ ಆರ್‌ ಕೆ/ಆರ್ಕೆ ಸಿನಿಮಾದ ಸುದ್ದಿಗೋಷ್ಟಿಯಲ್ಲಿ ಮಾತಾನಾಡಿರುವ ಅವರು, ಚಿತ್ರ ರಂಗದಲ್ಲಿನ ಕರಾಳ ಅನುಭವದ ಬಗ್ಗೆ ಹೇಳಿದ್ದಾರೆ.

“ಎ ಗ್ರೇಡ್‌ ನಟರು ನನ್ನೊಂದಿಗೆ ನಟಿಸಲು ನಿರಾಕರಿಸಿದರು. ನಾನು ಅವರೊಂದಿಗೆ ಕಾಂಪ್ರಮೈಸ್‌ ಮಾಡಿಕೊಳ್ಳಲ್ಲ ಎನ್ನುವ ಕಾರಣಕ್ಕಾಗಿ ಅವರು ಹೀಗೆ ಮಾಡಿದರು. ಆದರೆ ನಾನು ಕಾಂಪ್ರಮೈಸ್‌ ಮಾಡಿಕೊಳ್ಳಲ್ಲ. ನನ್ನ ವ್ಯಕ್ತಿತ್ವ ಅಂಥದ್ದಲ್ಲ” ಎಂದವರು ಹೇಳಿದ್ದಾರೆ.

ಇದನ್ನೂ ಓದಿ: ಕಾಮನ್‌ವೆಲ್ತ್‌ ಗೇಮ್ಸ್‌: ಗ್ರಾಹಕರನ್ನು ದಿಗ್ಭ್ರಮೆಗೊಳಿಸಿದ ಫ್ರೆಂಚ್‌ ಫ್ರೈಸ್‌ ಬೆಲೆ!

Advertisement

“ಕಾಂಪ್ರಮೈಸ್‌ ಎಂದರೆ ನಾವು ನಟಿಸುವ ನಟನೊಂದಿಗೆ ನಾವು ಒಳ್ಳೆಯ ರೀತಿಯಲ್ಲಿರಬೇಕು. ಅವರ ನಿಯಂತ್ರಣದಲ್ಲಿರಬೇಕು. ಯಾವಾಗ, ಎಲ್ಲಿಗೆ ಹೇಳುತ್ತಾರೋ ಅಲ್ಲಿಗೆ ಹೋಗಬೇಕು. ಅವರು ರಾತ್ರಿ 3 ಗಂಟಗೆ ಫೋನ್‌ ಮಾಡಿ ಮನೆಗೆ ಕರೆದರೂ ನಾವು ಹೋಗಬೇಕು. ಇಲ್ಲದಿದ್ರೆ, ಚಿತ್ರದಿಂದ ನಮ್ಮನ್ನು ತೆಗೆಯಲಾಗುತ್ತದೆ” ಎಂದು ಹೇಳಿದ್ದಾರೆ.

ನಾಯಕಿಯಾಗಿ ನಾನು ಎಲ್ಲ ನಟ -ನಟಿಯರ ಹಾಗೆ ಒಂದಷ್ಟು ತಪ್ಪುಗಳನ್ನು ಮಾಡಿದ್ದೇನೆ. ಹೆಚ್ಚು ನಟಿಸಲು ಪ್ರಯತ್ನಿಸಿದ್ದೇನೆ. ಉತ್ತಮ ಪಾತ್ರವನ್ನು ಮಾಡಿದ್ದೇನೆ,ಕೆಟ್ಟ ಪಾತ್ರವನ್ನೂ ಮಾಡಿದ್ದೇನೆ. ನನ್ನ ಜರ್ನಿಯ ಬಗ್ಗೆ ನನಗೆ ತೃಪ್ತಿಯಿದೆ ಎಂದಿದ್ದಾರೆ.

ಇದೇ ವೇಳೆ ಅವರು, ನಾನು ಚಿತ್ರರಂಗಕ್ಕೆ ಬಂದು 20 ವರ್ಷಗಳಾಗಿವೆ. ಮರ್ಡರ್‌ ಚಿತ್ರದ ಬಳಿಕ ಜಾಕಿಜಾನ್‌ ಅವರ ಚಿತ್ರದಲ್ಲಿ ನಟಿಸಲು ಅವಕಾಶ ಕೊಟ್ಟರು. ಎರಡು ಬಾರಿ ಬರಾಕ್‌ ಒಬಾಮರನ್ನು ಭೇಟಿಯಾಗಿದ್ದೇನೆ. ನನ್ನ ಪಯಣದಲ್ಲಿ ನನ್ನನು ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬಂದಿವೆ. ಅದರ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಹೇಳಿದ್ದಾರೆ.

ಮಲ್ಲಿಕಾ ಶೆರಾವತ್‌ ಹಾಲಿವುಡ್‌ ನಲ್ಲಿ ʼದಿ ಮಿತ್‌, ʼಹಿಸ್‌, ʼಪಾಲಿಟಿಕ್ಸ್‌ ಆಫ್‌ ಲವ್‌ʼ, ʼಟೈಮ್‌ ರೈಡರ್ಸ್‌ʼ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next