Advertisement
ಈ ಪುರಸಭೆ ವ್ಯಾಪ್ತಿಗೊಳಪಟ್ಟಿರುವ ಮಲ್ಲಾರು ಗ್ರಾಮದ 16 ಮತ್ತು 17ನೇ ವಾರ್ಡ್‌ನಲ್ಲಿರುವ ಅವಳಿ ಸೇತುವೆಗಳ ತಳಭಾಗವು ಕೊಳೆತ ತ್ಯಾಜ್ಯ ವಸ್ತುಗಳಿಂದಲೇ ತುಂಬಿ ಹೋಗಿದ್ದು, ಸುತ್ತಲೂ ಕೆಟ್ಟ ದುರ್ನಾತ ಬೀರುವ ಮೂಲಕ ಪುರಸಭೆಯ ಪ್ರಸಿದ್ಧಿಗೆ ಅಪಚಾರ ಉಂಟು ಮಾಡುವ ಪ್ರದೇಶಗಳಾಗಿ ಮಾರ್ಪಾಡಾಗುತ್ತಿವೆ.
ಕಾಪು ಶ್ರೀ ಲಕೀÒ$¾ ಜನಾರ್ದನ ದೇವಸ್ಥಾನ ಬಳಿಯಲ್ಲಿ ಹಾದು ಹೋಗುವ ಕಾಪು – ಶಿರ್ವ ರಾಜ್ಯ ಹೆದ್ದಾರಿಯಲ್ಲಿರುವ ಬಡಗರಗುತ್ತು ವಾರ್ಡ್ ವ್ಯಾಪ್ತಿಗೆ ಬರುವ ಮಲ್ಲಾರು ಕೊಂಬಗುಡ್ಡೆ ಸೇತುವೆ ಮತ್ತು ಜನಾರ್ದನ ದೇವಸ್ಥಾನ ವಾರ್ಡ್ ವ್ಯಾಪ್ತಿಗೆ ಬರುವ ರಾಷ್ಟ್ರೀಯ ಹೆದ್ದಾರಿ 66ರಿಂದ ಕೊಪ್ಪಲಂಗಡಿ – ಕೋಟೆ ರೋಡ್‌ನ ಸೇತುವೆಯ ಕೆಳಭಾಗದಲ್ಲಿ ಭರ್ಜರಿಯಾಗಿ ತ್ಯಾಜ್ಯ ಸಂಗ್ರಹಣೆಯಾಗುತ್ತಿದೆ. ಡಂಪಿಂಗ್ ಯಾರ್ಡ್‌ನೂ° ಮೀರಿಸುವಂತಿದೆ
ಮಲ್ಲಾರು ಗ್ರಾಮದ ಎರಡು ಸೇತುವೆಗಳ ತಳಭಾಗದಲ್ಲಿ ಸಂಗ್ರಹವಾಗುತ್ತಿರುವ ಕೊಳೆತ ತ್ಯಾಜ್ಯದ ರಾಶಿಯನ್ನು ಗಮನಿಸಿದಾಗ ಇದು ಕಾಪು ಪುರಸಭೆಯ ಅಧಿಕೃತ ಡಂಪಿಂಗ್ ಯಾರ್ಡ್‌ಗಿಂತಲೂ ದೊಡ್ಡಮಟ್ಟದ ತ್ಯಾಜ್ಯ ಸಂಗ್ರಹಣಾ ಕೇಂದ್ರವಾಗಿ ಮಾರ್ಪಟ್ಟಿದ್ದು, ಡಂಪಿಂಗ್ ಯಾರ್ಡ್‌ನೂ° ಮೀರಿಸುವಂತಿದೆಯೋ ಎಂಬ ಸಂಶಯ ಸ್ಥಳೀಯರ ಮನಸ್ಸಿನಲ್ಲಿ ಮೂಡಿಬರುವಂತಾಗಿದೆ.
Related Articles
ಮಲ್ಲಾರು ಬಡಗರಗುತ್ತು ಮತ್ತು ಜನಾರ್ದನ ದೇವಸ್ಥಾನ ವಾರ್ಡ್‌ನ ಮಲ್ಲಾರು ಕೋಟೆ ರೋಡ್‌ನಲ್ಲಿರುವ ಸೇತುವೆಗಳ ಅಡಿ ಭಾಗದಲ್ಲಿ ಕೋಳಿ – ಮಾಂಸದಂಗಡಿಗಳ ಕೊಳೆತ ತ್ಯಾಜ್ಯ, ನಾಯಿ, ಬೆಕ್ಕು ಸಹಿತ ಸಾಕು ಪ್ರಾಣಿಗಳ ಕಳೇಬರಗಳು, ಬಟ್ಟೆ, ಪ್ಲಾಸ್ಟಿಕ್, ಗಾಜಿನ ಚೂರುಗಳ ಸಹಿತವಾದ ವಿವಿಧ ತ್ಯಾಜ್ಯ ವಸ್ತುಗಳು, ಕೊಳೆತ ತರಕಾರಿ ವಸ್ತುಗಳು, ಕಾರ್ಯಕ್ರಮಗಳಲ್ಲಿ ಉಳಿಸಿ, ಬಿಸಾಡುವ ಎಂಜಲು ಮತ್ತು ಹಳಸಿದ ಅನ್ನ ಪದಾರ್ಥಗಳು ಹೀಗೆ ನೂರಾರು ಬಗೆಯ ತ್ಯಾಜ್ಯ ವಸ್ತುಗಳು ಎರಡೂ ಸೇತುವೆಗಳ ತಳಭಾಗದಲ್ಲಿ ತುಂಬಿ ಹೋಗಿದ್ದು ಸುತ್ತಲೂ ಕೆಟ್ಟ ದುರ್ನಾತ ಬೀರುತ್ತಿದೆ.
Advertisement
ಎಚ್ಚರಿಕೆ ಫಲಕಕ್ಕೆ ಕೇರೇ ಇಲ್ಲಮಲ್ಲಾರು ಕೊಂಬಗುಡ್ಡೆ ಸೇತುವೆ ಮತ್ತು ಕೋಟೆ ರೋಡ್‌ನ ಸೇತುವೆಯ ತಳಭಾಗವು ಹಿಂದೆ ಗ್ರಾಮ ಪಂಚಾಯತ್ ಇರುವ ಕಾಲದಿಂದಲೂ ತ್ಯಾಜ್ಯ ಎಸೆಯುವ ಗುಂಡಿಂಯತೆಯೇ ಭಾಸವಾಗುತ್ತಿತ್ತು. ಇಲ್ಲಿನ ತೋಡಿನಲ್ಲಿ ನೀರು ಸರಾಗವಾಗಿ ಹರಿದು ಹೋಗುವಾಗ ವಾಸನೆ ಗೊತ್ತಾಗುತ್ತಿರಲಿಲ್ಲ. ಆದರೆ ಈಗ ನೀರು ಬತ್ತಿ ಹೋಗಿರುವುದರಿಂದ ತ್ಯಾಜ್ಯದ ವಾಸನೆ ಘಮ್ಮೆಂದು ಹಬ್ಬುತ್ತಿದೆ. ಎರಡೂ ಕಡೆಗಳಲ್ಲಿ ಕಾಪು ಪುರಸಭೆ ಎಚ್ಚರಿಕೆ ಫಲಕ ಹಾಕಿದೆಯಾದರೂ ಜನರು ಮಾತ್ರಾ ಅದಕ್ಕೆ ಡೋಂಡ್ ಕೇರ್ ಎಂದು ಹೇಳುತ್ತಿದ್ದಾರೆ. ಮನವಿ ಮಾಡಲಾಗಿದೆ
ಮಲ್ಲಾರು ಕೋಟೆ ರೋಡ್ ಸೇತುವೆಯ ತಳಭಾಗದಲ್ಲಿ ಸಂಗ್ರಹವಾಗುತ್ತಿರುವ ತ್ಯಾಜ್ಯದ ಬಗ್ಗೆ ಪುರಸಭೆಗೆ ಹಲವು ಬಾರಿ ದೂರು ನೀಡಲಾಗಿದೆ. ಸೇತುವೆ ತಳಭಾಗದಲ್ಲಿ ಶೇಖರಣೆಯಾಗುವ ತ್ಯಾಜ್ಯ ಅಲ್ಲೇ ಕೊಳೆತು ದುರ್ನಾತ ಬೀರುತ್ತಿದ್ದು, ಜನರು ಜನಪ್ರತಿನಿಧಿಗಳಾದ ನಮ್ಮನ್ನು ದೂರುವಂತಾಗಿದೆ. ಇಲ್ಲಿನ ತ್ಯಾಜ್ಯವನ್ನು ಶುಚಿಗೊಳಿಸಿ, ತೋಡಿನ ಹೂಳೆತ್ತಿದರೆ ಹೇರಳ ಜಲ ಸಂಪನ್ಮೂಲ ದೊರಕುವ ಸಾಧ್ಯತೆಯಿದೆ. ಆ ಮೂಲಕ ಸರಾಗವಾಗಿ ನೀರು ಹರಿಯಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಈ ಬಗ್ಗೆಯೂ ವಿಶೇಷ ಅನುದಾನ ಮೀಸಲಿಟ್ಟು ಹೂಳೆತ್ತುವಿಕೆ ನಡೆಸಲು ಪುರಸಭೆಯ ಮುಖ್ಯಾಧಿಕಾರಿಗಳಿಗೆ ಮನವಿ ಮಾಡಲಾಗಿದೆ.
– ವಿಜಯಲಕೀÒ ¾ಜಿ. ಕೋಟ್ಯಾನ್
16ನೇ ಜನಾರ್ದನ ದೇವಸ್ಥಾನ ವಾರ್ಡ್‌ನ ಸದಸ್ಯೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ
ಮಲ್ಲಾರು ಗ್ರಾಮದ ಕೊಂಬಗುಡ್ಡೆ ಸೇತುವೆ ಮತ್ತು ಕೋಟೆರೋಡ್‌ನ ಸೇತುವೆ ತಳಭಾಗದಲ್ಲಿ ತ್ಯಾಜ್ಯದ ರಾಶಿ ಬೆಳೆದಿರುವ ಬಗ್ಗೆ ದೂರು ಬಂದಿದೆ. ತ್ಯಾಜ್ಯ ವಿಲೇವಾರಿಗೆ ಶೀಘ್ರ ಕ್ರಮ ತಗೆದುಕೊಳ್ಳುತ್ತೇವೆ. ಈಗಾಗಲೇ ಆ ಪ್ರದೇಶಗಳಲ್ಲಿ ಎಚ್ಚರಿಕೆ ಫಲಗಳನ್ನು ಹಾಕಲಾಗಿದ್ದು, ಮುಂದೆ ಸಿಸಿ ಕ್ಯಾಮರಾ ಅಳವಡಿಸಿ ತ್ಯಾಜ್ಯ ತಂದು ಸುರಿಯುವವರನ್ನು ಪತ್ತೆ ಹಚ್ಚಿ, ಹಾಕುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ.
– ರಾಯಪ್ಪ ಮುಖ್ಯಾಧಿಕಾರಿ, ಕಾಪು ಪುರಸಭೆ