Advertisement

ಮಲ್ಲಾರು: ತಾಯಿ –ಮಗು ನಾಪತ್ತೆ; ದೂರು ದಾಖಲು

04:36 PM Jan 02, 2023 | Team Udayavani |

ಕಾಪು: ಮಲ್ಲಾರು ಗ್ರಾಮದ ಕೊಂಬಗುಡ್ಡೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ತಾಯಿ ಮತ್ತು ಮಗು ಡಿ. 25ರಿಂದ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.

Advertisement

ಕಾಪು ಪರಿಸರದಲ್ಲಿ ಮೇಸ್ತ್ರಿ ಕೆಲಸ ಮಾಡಿಕೊಂಡಿರುವ ಪ್ರಸ್ತುತ ಮಲ್ಲಾರು ಗ್ರಾಮದ ಕೊಂಬುಗುಡ್ಡೆಯ ಮುಸ್ತಾಕ್‌ ಸಾಹೇಬರ ಬಾಡಿಗೆ ಮನೆಯಲ್ಲಿ ವಾಸವಿರುವ ಅಮೀನ್‌ ಎಂಬವರ ಪತ್ನಿ ಮುತ್ತವ್ವ (26) ಮತ್ತು ಮಗಳು ಗಂಗಾ (2.6) ನಾಪತ್ತೆಯಾದವರು.

ಅಮೀನ್‌ ಡಿ.25ರಂದು ಬೆಳಗ್ಗೆ ಮನೆಯಲ್ಲಿ ತಿಂಡಿ ತಿಂದು ಸಂಬಳ ತರುವುದಕ್ಕಾಗಿ ಕಾಪುವಿನಲ್ಲಿರುವ ತನ್ನ ಮಾಲಕರ ಮನೆಗೆ ಬಂದು ಕಾಪು ಪೇಟೆಯಲ್ಲಿ ಸ್ನೇಹಿತರಲ್ಲಿ ಮಾತನಾಡಿ 10 ಗಂಟೆ ವೇಳೆಗೆ ಮನೆಗೆ ಹೋದಾಗ ಹೆಂಡತಿ ಮತ್ತು ಮಗು ಕಾಣೆಯಾಗಿರುವುದು ಬೆಳಕಿಗೆ ಬಂದಿತ್ತು.

ಈ ಬಗ್ಗೆ ಹೆಂಡತಿಯ ಮೊಬೈಲ್ ಗೆ ಕರೆ ಮಾಡಿದಾಗ ಮೊಬೈಲ್‌ ಸ್ವಿಚ್‌ ಆಪ್‌ ಆಗಿದ್ದು, ಸಂಬಂಧಿಕರ ಹಾಗೂ ಸ್ನೇಹಿತರಿಗೆ ಕರೆ ಮಾಡಿ ಪತ್ತೆಯ ಬಗ್ಗೆ ಪ್ರಯತ್ನಿಸಿದ್ದು ಈ ವರೆಗೆ ಪತ್ತೆಯಾಗಿರುವುದಿಲ್ಲ.

ಈ ಬಗ್ಗೆ ಕಾಪು ಪೊಲೀಸ್‌ ಠಾಣೆಗೆ ದೂರು ನೀಡಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next