Advertisement

ಕೇಂದ್ರ ಸಂಪುಟದಲ್ಲಿ ಎಲ್ಲ ವರ್ಗಕ್ಕೆ ಹೆಸರಿಗೆ ಮಾತ್ರ ಮಂತ್ರಿ ಸ್ಥಾನ: ಮಲ್ಲಿಕಾರ್ಜುನ ಖರ್ಗೆ

04:34 PM Oct 02, 2021 | Team Udayavani |

ಕಲಬುರಗಿ: ಕೇಂದ್ರದ ಸಂಪುಟದಲ್ಲಿ ಎಲ್ಲ ವರ್ಗದವರಿಗೆ ಪ್ರಾತಿನಿದ್ಯತೆ ನೀಡಲಾಗಿದೆ ಎಂದು ಹೇಳಲಾಗುತ್ತದೆ. ಆದರೆ ಅವರಿಗೆ ಅಧಿಕಾರ ಭಾಗ್ಯ ಕಲ್ಪಿಸಿಲ್ಲ ಎಂದು ರಾಜ್ಯಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.

Advertisement

ರಾಜ್ಯಸಭೆ ಸದಸ್ಯ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ ನಂತರ ಕಲಬುರಗಿಗೆ ಪ್ರಥಮ ಬಾರಿಗೆ ಆಗಮಿಸಿದ ಅವರು ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿತಗೊಂಡು ಮಾತನಾಡಿದರು.

ಕೇಂದ್ರದಲ್ಲಿ ಎಲ್ಲ ವರ್ಗಕ್ಕೆ ಸ್ಥಾನ ನೀಡಲಾಗಿದೆಯಾದರೂ ಅವರ್ಯಾರು ಸಂಪುಟ ದರ್ಜೆಯ ಸಚಿವರಾಗದೇ ರಾಜ್ಯ ಸಚಿವರಾಗಿದ್ದಾರೆ. ಹೀಗಾಗಿ ಯಾವುದೇ ಅಧಿಕಾರ ನೀಡಿಲ್ಲ. ಕೇಂದ್ರದ ಮಂತ್ರಿ ಎಂಬುದಾಗಿ ಹೆಸರು ಮಾತ್ರ ಹಾಕಿಕೊಳ್ಳಲು ಮಾತ್ರ ಸಿಮೀತ ಎನ್ನುವಂತಾಗಿದೆ. ಅತ್ತ ಉತ್ತರ ಪ್ರದೇಶದ ಸಂಪುಟದಲ್ಲೂ ಇದೇ ರೀತಿ ಆಗಿದೆ. ಹೀಗಾಗಿ ಮೋದಿ, ಯೋಗಿ ಇಬ್ಬರು ಬೇರೆಯವರಿಗೆ ಅಧಿಕಾರ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಕೇಂದ್ರದಿಂದ ಗಾಂಧೀಜಿಯವರ ವಿಚಾರ ಎಲ್ಲೆಡೆ ತಲುಪಿಸಲು ಸಾಧ್ಯವಾಗಿದೆ: ಪ್ರಮೋದ್ ಸಾವಂತ್

ಕಾಂಗ್ರೆಸ್ ಸರ್ಕಾರ 70 ವರ್ಷ ಏನು ಮಾಡಿದೆ ಎಂದು ಈಗಲೂ ಪ್ರಶ್ನೆ ಮಾಡಲಾಗುತ್ತಿದೆ. ಆದರೆ ತಾವೇನು ಮಾಡಿದ್ದೇವೆ, ಏನೆಂಬುದನ್ನು ಹೇಳುವುದೇ ಇಲ್ಲ. ತೈಲ ಬೆಲೆ ಗಗನಕ್ಕೇರಿದೆ. ಉದ್ಯಮಿಗಳ ಪರ ಕಾಯ್ದೆಗಳನ್ನು ರೂಪಿಸಲಾಗುತ್ತಿದೆ.  ದೇಶದಲ್ಲಿ ಹಾಳಾಗುವ ಸರ್ಕಾರ ಯಾವುದಾದರೂ ಇದ್ದರೆ ಕೇಂದ್ರದ ಬಿಜೆಪಿ ಸರ್ಕಾರ ಎಂದು ಟೀಕಿಸಿದರು ‌.

Advertisement

ಜನ ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಸ್ವಾತಂತ್ರ್ಯಕ್ಕೆ ಉಳಿಗಾಲವಿಲ್ಲ ಎಂದು ಆತಂಕ ವ್ಯಕ್ತಪಡಿಸಿದ ಡಾ. ಖರ್ಗೆ, ತಮ್ಮನ್ನು ಸೋಲಿಸಿದ್ದು ಕಲಬುರಗಿ ಜನ ಅಲ್ಲ.  ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ ಶಾ ಹಾಗೂ ಆರ್ ಎಸ್ ಎಸ್ ನವರು ಸೋಲಿಸಿದ್ದಾರೆ ಎಂದರು.

ತಮ್ಮ ಉಸಿರು ಇರುವರೆಗೂ ರಾಜಕೀಯ ಕ್ಷೇತ್ರದಲ್ಲಿ ಹೋರಾಟ ಮುಂದುವರೆಯುವತ್ತೇ ಎಂದು ಗುಡುಗಿದ ಡಾ. ಖರ್ಗೆ, ಈಗ ಕಲ್ಯಾಣ ಕರ್ನಾಟಕ ಭಾಗದಲ್ಲಿ ಏಳು ಜಿಲ್ಲೆಗಳಾಗಿವೆ. 371 ಜೆ ಜಾರಿ ಮುನ್ನ ಈ ಭಾಗದಲ್ಲಿ ಕೇವಲ 80 ವೈದ್ಯಕೀಯ ಸೀಟುಗಳು ಸಿಗುತ್ತಿದ್ದವು. ಆದರೆ 4000 ಸಾವಿರ ಸೀಟುಗಳು ಸಿಕ್ಕಿವೆ. ಇಂತಹ ಕಾಯ್ದೆ ಯಾರಾದರೂ ಜಾರಿ ತಂದಿದ್ದಾರೆಯೇ, ಅದೇ ರೀತಿ ನೂರಾರು ತಹಸೀಲ್ದಾರರು, ಡಿವೈಎಸ್ಪಿಗಳಾಗಿದ್ದಾರೆ. ಆದರೆ ಬಿಜೆಪಿಗರಿಗೆ ಈ ಭಾಗದ ಅಭಿವೃದ್ಧಿ ಮಾಡೋದು ಒತ್ತಟ್ಟಗಿರಲಿ, ಈ ಭಾಗದ ಯೋಜನೆಗಳನ್ನೇ ಕಿತ್ತುಕೊಂಡು ಹೋಗುತ್ತಿದ್ದಾರೆ ಎಂದು ಡಾ.ಖರ್ಗೆ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next