Advertisement

ಇಟ್ಟ ರಾಮನ ಬಾಣ ಹುಸಿಯಿಲ್ಲ… ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕದ ನುಡಿಮುತ್ತು

09:38 AM Oct 25, 2023 | Team Udayavani |

ಚಿಕ್ಕಮಗಳೂರು: ‘ಇಟ್ಟ ರಾಮನ ಬಾಣ ಹುಸಿಯಿಲ್ಲ… ಸುರರು ಅಸೂರರು ಕಾದಾಡಿದರು. ಭಕ್ತ ಕೋಟಿಗೆ ಮಂಗಳವಾಯಿತು. ಶಾಂತಿಯ ಮಂತ್ರ ಪಠಿಸಿದರು. ಸರ್ವರು ಎಚ್ಚರದಿಂದ ಇರಬೇಕು ಪರಾಕ್’… ಎಂದು ಚಿಕ್ಕಮಗಳೂರು ಜಿಲ್ಲೆಯ ಇತಿಹಾಸ ಪ್ರಸಿದ್ಧ ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕದ ನುಡಿಮುತ್ತು ಬುಧವಾರ ಹೊರಬಿದ್ದಿದೆ.

Advertisement

ಬೀರೂರು ಪಟ್ಟಣದಲ್ಲಿರುವ ಮೈಲಾರಲಿಂಗ ಸ್ವಾಮಿ ದೇವಸ್ಥಾನದಲ್ಲಿ ರಾತ್ರಿಯಿಂದ ಹೂವಿನ ಪಲಕ್ಕಿಯೊಂದಿಗೆ ಮೈಲಾರಲಿಂಗ ಸ್ವಾಮಿಯ ಮೆರವಣಿಗೆ ನಡೆಯಿತು. ಅಷ್ಟು ಮಾತ್ರವಲ್ಲದೆ ಮೈಲಾರಲಿಂಗೇಶ್ವರ ದರ್ಶನಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ಭಕ್ತರು ಆಗಮಿಸಿದ್ದಾರೆ.

ಮುಂಜಾನೆ 4.42ರ ಹೊತ್ತಿಗೆ ದಶರಥ ಪೂಜಾರ್ ಅವರಿಂದ ಹೊರ ಬಿದ್ದ ಕಾರ್ಣಿಕದ ನುಡಿ, ಈ ಹಿಂದೆಯೂ ಕಾರ್ಣಿಕದ ನುಡಿಯಂತೆ ನಡೆದಿರುವ ಘಟನೆಗಳನ್ನೂ ಇಲ್ಲಿನ ಭಕ್ತರು ಹೇಳಿದ್ದಾರೆ.

ಇದನ್ನೂ ಓದಿ: Police Dog: ಪೊಲೀಸ್ ಇಲಾಖೆಯಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ ಶ್ವಾನಕ್ಕೆ ಬೀಳ್ಕೊಡುಗೆ

Advertisement

Udayavani is now on Telegram. Click here to join our channel and stay updated with the latest news.

Next