ಚಾಮರಾಜನಗರ: ತಾಲೂಕಿನ ಮಲೆಯೂರು ಗ್ರಾಮದಲ್ಲಿ ಮಂಗಳವಾರ ಸೋಮೇಶ್ವರ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಗ್ರಾಮ ದೇವತೆ ಮಾರಮ್ಮ ಹಾಗೂ ಸೋಮೇಶ್ವರ ಜಾತ್ರೆ ಪ್ರತಿವರ್ಷ ನಿರಂತರವಾಗಿ ನಡೆಯುತ್ತಾ ಬಂದಿದ್ದು, ಈ ಬಾರಿ ಮಂಗಳವಾರ ಸೋಮೇಶ್ವರ ರಥೋತ್ಸವ ನಡೆಯಿತು. ಸಂಜೆ 4ಕ್ಕೆ ರಥೋತ್ಸವ ಆರಂಭವಾಗಿ, 6 ಗಂಟೆಯವರೆಗೂ ನಡೆಯಿತು. ಭಕ್ತಾದಿಗಳು ರಥಕ್ಕೆ ಬಾಳೆಹಣ್ಣು ಜವನ ಎಸೆದು ತಮ್ಮ ಹರಕೆಗಳನ್ನು ಪೂರೈಸಿದರು. ರಥದ ಚಕ್ರಕ್ಕೆ ತೆಂಗಿನಕಾಯಿಗಳನ್ನು ಒಡೆದರು. ಉಘೇ ಉಘೇ ಘೋಷಗಳನ್ನು ಕೂಗಿದರು.
ರಥೋತ್ಸವದಲ್ಲಿ ತಾಲೂಕು ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತಾದಿಗಳು ಆಗಮಿಸಿದ್ದರು. ಗ್ರಾಮಸ್ಥರು ನೆಂಟರಿಷ್ಟರನ್ನು ಜಾತ್ರೆಗೆ ಆಹ್ವಾನಿಸಿ, ಕಜ್ಜಾಯದ ಸಿಹಿಊಟ ಸವಿದು ಸಂಭ್ರಮಿಸಿದರು.
ಇದನ್ನೂ ಓದಿ: ಪ್ರೀತಿಸುವ ನಾಟಕವಾಡಿ ಅಪ್ರಾಪ್ತೆಯ ಅಪಹರಿಸಿ ಅತ್ಯಾಚಾರ: 7 ಮಂದಿಗೆ 10 ವರ್ಷ ಶಿಕ್ಷೆ