Advertisement

ಮಾಲೆಗಾಂವ್‌ ಪ್ರಕರಣ ಸಾಧ್ವಿ ,ಪುರೋಹಿತ್‌ ಮಕೋಕಾ ನಿರಾಳ

06:00 AM Dec 28, 2017 | Harsha Rao |

ಮುಂಬೈ: ರಾಜಕೀಯವಾಗಿ ಮಹತ್ವ ಪಡೆದುಕೊಂಡಿರುವ ಮಾಲೆಗಾಂವ್‌ ಸ್ಫೋಟ ಪ್ರಕರಣದ ಆರೋಪಿಗಳಾದ ಸಾಧ್ವಿ ಪ್ರಜ್ಞಾಸಿಂಗ್‌ ಠಾಕೂರ್‌ ಹಾಗೂ ನಿವೃತ್ತ ಲೆμrನೆಂಟ್‌ ಕರ್ನಲ್‌ ಪ್ರಸಾದ್‌ ಪುರೋಹಿತ್‌ ವಿರುದಟಛಿ ಮಹಾರಾಷ್ಟ್ರ ಸಂಘಟಿತ
ಅಪರಾಧಗಳ ಕಾಯ್ದೆಯಡಿ (ಎಂಸಿಒಸಿಎ) ದಾಖಲಾಗಿದ್ದ ಎಲ್ಲಾ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ವಿಶೇಷ ನ್ಯಾಯಾಲಯ ಕೈಬಿಟ್ಟಿದೆ.

Advertisement

ಇದರ ಜತೆಗೆ, ಪ್ರಕರಣದ ಇತರ ಆರೋಪಿಗಳಾದ ಶ್ಯಾಮ್‌ ಸಾಹು, ಶಿವನಾರಾಯಣ್‌ ಕಾಲ್ಸಂಗ್ರ ಹಾಗೂ ಪ್ರವೀಣ್‌ ಟಕಾಲ್ಕಿ ಅವರನ್ನು ಆರೋಪ ಮುಕ್ತಗೊಳಿಸಿದೆ. ಇದಲ್ಲದೆ, ಆರೋಪಿಗಳ ವಿರುದಟಛಿ ಯುಎಪಿಎ ಕಾಯ್ದೆಯ 17(ಉಗ್ರ ಕೃತ್ಯಕ್ಕೆ ಹಣಕಾಸು ಸಂಗ್ರಹ), 20(ಉಗ್ರ ಸಂಘಟನೆಯ ಭಾಗವಾಗಿರುವುದು) ಹಾಗೂ 23(ಉಗ್ರ ಸಂಘಟನೆಯ ಅಂಗವಾಗಿರುವ ವ್ಯಕ್ತಿಗೆ ನೆರವು)ನೇ ಪರಿಚ್ಛೇದಗಳ ಅಡಿಯಲ್ಲಿ ದಾಖಲಾಗಿದ್ದ ಎಲ್ಲಾ ಆರೋಪಗಳನ್ನೂ ನ್ಯಾಯಾಲಯ ತಳ್ಳಿಹಾಕಿದೆ.

ವಿಚಾರಣೆ ಕೈಬಿಡಲು ನಕಾರ: ಇದೇ ವೇಳೆ, ತಮ್ಮ ವಿರುದಟಛಿದ ವಿಚಾರಣೆಯನ್ನು ಕೈಬಿಡಬೇಕೆಂದು ಕೋರಿ ಸಾಧ್ವಿ, ಕರ್ನಲ್‌ ಪುರೋಹಿತ್‌ ಹಾಗೂ ಇತರ ಆರೋಪಿಗಳು ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ತಳ್ಳಿಹಾಕಿದೆ. ಈ ಮನವಿಗಳಿಗೆ ಉತ್ತ ರಿಸಿರುವ ನ್ಯಾಯಾಲಯ, ಈ ಪ್ರಕರಣದ ಆರೋಪಿಗಳು ಇನ್ನು ಮುಂದೆ ಕಾನೂನು ಬಾಹಿರ
ಚಟುವಟಿಕೆಗಳ ನಿಗ್ರಹ ಕಾಯ್ದೆಯ (ಯುಎಪಿಎ) 16, 18ನೇ ಪರಿಚ್ಛೇದ (ಭಯೋತ್ಪಾದನೆ, ಅಪರಾಧಕ್ಕೆ ಸಂಚು) ಹಾಗೂ ಭಾರತೀಯ ದಂಡ ಸಂಹಿತಿಯ (ಐಪಿಸಿ) 307 (ಕೊಲೆ ಯತ್ನ) ಹಾಗೂ 326 (ಘಾಸಿಗೊಳಿಸುವ ಉದ್ದೇಶ) ಪರಿಚ್ಛೇದಗಳ ಅಡಿಯಲ್ಲಿ ವಿಚಾರಣೆಗೊಳಪಡಬೇಕೆಂದು ತೀರ್ಪಿತ್ತಿದೆ.

ಪ್ರತ್ಯೇಕ ವಿಚಾರಣೆ: ಪ್ರಕರಣದ ಮತ್ತಿಬ್ಬರು ಆರೋಪಿಗಳಾದ ಜಗದೀಶ್‌ ಮ್ಹಾತ್ರೆ ಹಾಗೂ ರಾಕೇಶ್‌ ಧಾಬ್ಡೆ ಅವರಿನ್ನು ಅಕ್ರಮ ಶಸ್ತ್ರಾಸ್ತ್ರ ನಿಷೇಧ ಕಾಯ್ದೆಯಡಿ ಮಾತ್ರ ವಿಚಾರಣೆಗೊಳಪಡಲಿದ್ದಾರೆ.

ಮುಂದಿನ ವಿಚಾರಣೆ ಜ.15ಕ್ಕೆ: ಪ್ರಕರಣದ ಮುಂದಿನ ವಿಚಾರಣೆ ಜನವರಿ 15ರಂದು ನಡೆಯಲಿದ್ದು, ಅದು ಆರೋಪಗಳನ್ನು ನಿಗದಿಪಡಿಸಲು ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ನ್ಯಾಯಾಧೀಶರು ಸೂಚಿಸಿದ್ದಾರೆ.

Advertisement

“ಕೇಸರಿ ಭಯೋತ್ಪಾದನೆ’ ಕಳಂಕ ಅಂಟಿಸಿದ ಯುಪಿಎ 2008ರ ಸೆಪ್ಟೆಂಬರ್‌ 29ರಂದು, ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ, ಮುಸ್ಲಿಂ ಜನಾಂಗ ಹೆಚ್ಚಾಗಿ ವಾಸಿಸುವ ಮಾಲೇಗಾಂವ್‌ನಲ್ಲಿರುವ ಭಿಕು ಚೌಕ್‌ ಬಳಿ ಬಾಂಬ್‌ ಸ್ಫೋಟವಾಗಿತ್ತು. ಈ
ಘಟನೆಯಲ್ಲಿ ಆರು ಮಂದಿ ಅಸುನೀಗಿ, ಹಲವಾರು ಮಂದಿ ಗಾಯಗೊಂಡಿದ್ದರು. ಈ ಪ್ರಕರಣ ದೇಶಾದ್ಯಂತ ತಲ್ಲಣ ಸೃಷ್ಟಿಸಿತು.

ಕಾಂಗ್ರೆಸ್‌ ಹಾಗೂ ಬಿಜೆಪಿ ಮಿತ್ರಪಕ್ಷಗಳ ನಡುವಿನ ವಾಗ್ಯುದಟಛಿಕ್ಕೂ ಕಾರಣವಾಗಿತ್ತು. ಈ ಹಂತದಲ್ಲಿ, ಆಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರದ ಸಚಿವ ಸುಶೀಲ್‌ ಕುಮಾರ್‌ ಶಿಂಧೆ, ಈ ಪ್ರಕರಣವನ್ನು “ಹಿಂದೂ ಉಗ್ರವಾದ’ ಎಂದು ಬಣ್ಣಿಸಿದ್ದರು. ಆನಂತರ, ಇದನ್ನು “ಕೇಸರಿ ಭಯೋತ್ಪಾದನೆ’ ಎಂದೂ ಬಣ್ಣಿಸಲಾಯಿತು. ಈ ಎರಡೂ ಪದ ಪ್ರಯೋಗಗಳು ಸಾಕಷ್ಟು ವಿವಾದಗಳಿಗೆ ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next