Advertisement

ಯೋಗಿ ಸಿಲುಕಿಸಲು ನಡೆದ ಯತ್ನ?

07:20 AM Oct 05, 2017 | |

ಮುಂಬೈ: 2008ರ ಮಾಲೇಗಾಂವ್‌ ಸ್ಫೋಟದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು, ಈ ಪ್ರಕರಣದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮತ್ತು ಇತರ ಹಿಂದೂ ಮುಖಂಡರನ್ನು ಸಿಲುಕಿಸಲು ಪ್ರಯತ್ನಿಸಿದ್ದರು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. ಮಾಲೇಗಾಂವ್‌ ಸ್ಫೋಟದ ಆರೋಪಿಗಳ ಲ್ಲೊಬ್ಬರಾದ ಸುಧಾಕರ ಚತುರ್ವೇದಿ ಅವರೇ ಈ ವಿಚಾರವನ್ನು ಬಾಯಿಬಿಟ್ಟಿದ್ದಾರೆ.

Advertisement

ಸದ್ಯ ಜಾಮೀನಿನ ಮೇಲೆ ಹೊರಬಂದಿರುವ ಅವರು, ಮಹಾರಾಷ್ಟ್ರದ ಅಂದಿನ ಕಾಂಗ್ರೆಸ್‌-ಎನ್‌ಸಿಪಿ ಸರ್ಕಾರ ಮುಸ್ಲಿಮರ ಓಲೈಕೆಗಾಗಿ ಮಾಲೇ ಗಾಂವ್‌ ಸ್ಫೋಟದ ತನಿಖೆಯನ್ನು ದುರುಪಯೋಗ ಮಾಡಿಕೊಂಡಿತು. ಹಲವಾರು ಹಿಂದೂ ಮುಖಂಡ ರನ್ನು ಇದರಲ್ಲಿ ಆರೋಪಿಗಳನ್ನಾಗಿ ಬಿಂಬಿಸಲು ಪ್ರಯತ್ನಿಸಿತು ಎಂದು ಹೇಳಿದ್ದಾರೆ. ನನ್ನನ್ನು ವಿಚಾರ ಣೆಗೊಳಪಡಿಸಿದ ವೇಳೆ, ಯೋಗಿ ಆದಿತ್ಯನಾಥ್‌ ಕುರಿತು ಹಲವಾರು ಪ್ರಶ್ನೆಗಳನ್ನು ಕೇಳಲಾಯಿತು. ನನ್ನ ಮೂಲಕ ಅವರ ಮೇಲೂ ಆರೋಪ ಹೊರಿಸುವ ಪ್ರಯತ್ನ ನಡೆಸಲಾಗಿತ್ತು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next