Advertisement

ಗುಂಡ್ಲುಪೇಟೆ: ಗಂಡು ಹುಲಿ ಮೃತ ದೇಹ ಪತ್ತೆ

07:22 PM Sep 14, 2021 | Team Udayavani |

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹೆಡಿಯಾಲ ಉಪ ವಿಭಾಗದ, ಗುಂಡ್ರೆ ವಲಯದ ಆನೆ ತಡೆ ಕಂದಕದ ಪೊದೆಯೊಂದರಲ್ಲಿ ಗಂಡು ಹುಲಿಯ ಕಳೆಬರ ಪತ್ತೆಯಾಗಿದೆ.

Advertisement

ಹುಲಿಗೆ ಸುಮಾರು 5 ರಿಂದ 6 ವರ್ಷ ವಯಸ್ಸಾಗಿದೆ ಎನ್ನಲಾಗಿದ್ದು, ಮೃತ ದೇಹ ಪರಿಶೀಲಿಸಿದಾಗ 3-4 ದಿನಗಳ ಹಿಂದೆ ಮುಳ್ಳು ಹಂದಿಯನ್ನು ತಿನ್ನಲು ಹೋಗಿ ಅದರ ಜೊತೆ ಕಾದಾಡಿ, ಹುಲಿಯ ಮುಂಗಾಲಿನಲ್ಲಿ ಹಂದಿಯ ಮುಳ್ಳುಗಳು ಚುಚ್ಚಿಕೊಂಡಿದೆ. ನಂತರ ಹೊರಬಂದು ಅದು ಸಣ್ಣ-ಪುಟ್ಟ ಪ್ರಾಣಿಗಳನ್ನು ಸುಲಭವಾಗಿ ಬೇಟೆಯಾಡಲು ಕಂದಕದ ಪೊದೆಯೊಂದರಲ್ಲಿ ಪ್ರಯತ್ನಿಸುತ್ತಿದ್ದಾಗ ಉರುಳಿಗೆ ಸಿಲುಕಿ ಒದ್ದಾಡಿ ಮೆದುಳಿನ ರಕ್ತಸ್ರಾವವಾಗಿ ಮೃತಪಟ್ಟಿದೆ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ನಟೇಶ್ ಮಾಹಿತಿ ನೀಡಿದ್ದಾರೆ.

ಪ್ರಕರಣದ ಕುರಿತು ಗುಂಡ್ರೆ ವಲಯದಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ಸ್ಥಳಕ್ಕೆ ರಾಣ ಸೇರಿದಂತೆ  ಇಲಾಖಾ ಶ್ವಾನವನ್ನು ಕರೆಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ ಮೃತ ಗಂಡು ಹುಲಿಯ ವಿವಿಧ ಅಂಗಾಂಗಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ.

ಮರಣೋತ್ತರ ಪರೀಕ್ಷೆ ನಡೆಸಿ ನಂತರ ನಿಯಮದ ಪ್ರಕಾರ ಹುಲಿ ಮೃತ ದೇಹವನ್ನು ಸುಡಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next