Advertisement

ಮಲೆ ಮಹದೇಶ್ವರ ಬೆಟ್ಟವು ಮದ್ಯ ಮುಕ್ತವಾಗಿಸಲು ಕ್ರಮ

03:08 PM Aug 26, 2021 | Team Udayavani |

ಹನೂರು: ಮಲೆ ಮಹದೇಶ್ವರ ಬೆಟ್ಟವು ಮುದ್ಯ ಮುಕ್ತವಲಯವಾಗಿದ್ದು, ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳ ಲಾಗಿದೆ ಎಂದು ಅಬಕಾರಿ ಜಿಲ್ಲಾಧಿಕಾರಿ ಕೆ.ಎಸ್‌.ಮುರಳಿ ತಿಳಿಸಿದರು.

Advertisement

ಪಟ್ಟಣದ ಲೋಕೋಪಯೋಗಿ ಇಲಾಖಾ ವಸತಿಗೃಹದಲ್ಲಿ ಅಬಕಾರಿ ಇಲಾಖಾ ಅಧಿಕಾರಿಗಳು ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆ ಮಹದೇಶ್ವರ ಬೆಟ್ಟದಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಲು ಹಲವಾರು ಕ್ರಮ ಕೈಗೊಂಡಿದೆ. ಈ ನಿಟ್ಟಿನಲ್ಲಿ ತಾಲೂಕಿನ ತಾಳಬೆಟ್ಟ ಸಮೀಪ ಅಬಕಾರಿ ಚೆಕ್‌ ಪೋಸ್ಟ್‌ ತೆರೆಯಲು ಕ್ರಮವಹಿಸಲಾಗಿದ್ದು, ಇಬ್ಬರು ಪೇದೆಗಳನ್ನು ನಿಯೋಜಿಸಲಾಗುವುದು ಎಂದರು.

ಕೊಳ್ಳೇಗಾಲ ವಿಭಾಗಕ್ಕೆ ಜಿಲ್ಲೆಯ ಇತರೆ ವಿಭಾಗಗಳಿಂದಲೂ ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜಿಸಿ 5 ತಂಡ ರಚಿಸಲಾಗಿದ್ದುಈಗಾಗಲೇ
10ಕ್ಕೂ ಹೆಚ್ಚು ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಅಲ್ಲದೆ ಶ್ರೀ ಕ್ಷೇತ್ರಕ್ಕೆ ಮದ್ಯ ಸರಬರಾಜು ಮಾಡುತ್ತಿದ್ದ ಸನ್ನದುದಾರರ ಲೈಸೆನ್ಸ್‌
ಸಹ 1 ವಾರಗಳ ಕಾಲ ಅಮಾನತು ಮಾಡಲಾಗಿತ್ತು. ಇದರ ಜೊತೆಗೆ ಅಬಕಾರಿ ಗಸ್ತು ವಾಹನವನ್ನೂ ನಿಯೋಜಿಸಲಾಗುವುದು
ಎಂದರು.

ಇದನ್ನೂ ಓದಿ:ನಾನು ಥಿಯೇಟರ್‌ ನಿಂದ ಸ್ಟಾರ್‌ ಆದವನು…ಒಟಿಟಿಯಲ್ಲಿ ರಿಲೀಸ್‌ಗೆ ಆಸಕ್ತಿ ಇಲ್ಲ

ಇದೇ ವೇಳೆ ಶ್ರೀ ಕ್ಷೇತ್ರದಲ್ಲಿ ಮಾತ್ರವಲ್ಲದೆ ತಾಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ, ಅಕ್ರಮ ಮದ್ಯ ಮಾರಾಟದ ಬಗ್ಗೆ ಯಾರೇ ದೂರು ನೀಡಿದರೂಆದೂರನ್ನು ಪರಿಶೀಲಿಸಿ ಕ್ರಮವಹಿಸಲಾಗುವುದು. ಅಲ್ಲದೆ ಮಾಹಿತಿದಾರರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು.ಈನಿಟ್ಟಿನಲ್ಲಿಮಾಹಿತಿದಾರರು ಅಧಿಕಾರಿಗಳ ಜೊತೆ ಸಹಕರಿಸಬೇಕು ಎಂದರು. ಅಬಕಾರಿ ನಿರೀಕ್ಷಕ ಸುನೀಲ್‌ ಮಾತನಾಡಿ, ಇಲಾಖೆ ಅಕ್ರಮಗಳನ್ನು ತಡೆಗಟ್ಟಲು ಆಗಿಂದಾಗ್ಗೆ ಕಾರ್ಯಪ್ರವೃತ್ತವಾಗಿದ್ದು ಕಳ್ಳಭಟ್ಟಿ ತಯಾರಿಕೆ, ಅಕ್ರಮ ಗಾಂಜಾ ಸಾಗಾಟ, ಅಕ್ರಮ ಮದ್ಯ ಸಾಗಾಟ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿದ್ದು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಹಲು 24×7 ಕಾರ್ಯ ನಿರ್ವಹಿಸಲಾಗುವುದು ಎಂದು ತಿಳಿಸಿದರು.

Advertisement

ಸಭೆಯಲ್ಲಿ ಅಬಕಾರಿ ಡೆಪ್ಯೂಡಿ ಸೂಪರಿಟೆಂಡೆಂಟ್‌ ಮೋಹನ್‌ಕುಮಾರ್‌, ಜಿಲ್ಲಾ ಅಬಕಾರಿ ತಂಡದ ನಿರೀಕ್ಷಕ ಮಹಾದೇವ, ಅಬಕಾರಿ ಇಲಾಖಾ ಪೇದೆ, ಸಿಬ್ಬಂದಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next