Advertisement

ಗಂಡು ಶಿಶು ಪತ್ತೆ ಪ್ರಕರಣ: ಸುಂಠಾಣದಲ್ಲಿ ವಿಚಾರಣೆ

01:16 PM Oct 14, 2018 | Team Udayavani |

ಚಿಂಚೋಳಿ: ತಾಲೂಕಿನ ಸುಂಠಾಣ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ರಸ್ತೆ ಪಕ್ಕದಲ್ಲಿ ಗಂಡು ಶಿಶು ಬಿಟ್ಟು ಹೋಗಿರುವ ಪ್ರಕರಣ ಕುರಿತು ಗ್ರಾಮಕ್ಕೆ ಶನಿವಾರ ಭೇಟಿ ನೀಡಿ ಅಲ್ಲಿನ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರನ್ನು ವಿಚಾರಿಸಲಾಗಿದೆ ಎಂದು ರಟಕಲ್‌ ಪೊಲೀಸ್‌ ಠಾಣೆ ಪಿಎಸ್‌ಐ ಇಂದಿರಾ ಬಿ.ಪಾಟೀಲ ಚಿಂಚೋಳಿ ತಿಳಿಸಿದ್ದಾರೆ.

Advertisement

ಸುಂಠಾಣ ಗ್ರಾಮದಲ್ಲಿ ಗಂಡು ಶಿಶುವೊಂದನ್ನು ರಸ್ತೆ ಪಕ್ಕದಲ್ಲಿ ಬಿಟ್ಟು ಹೋಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಟಕಲ್‌ ಮತ್ತು ಕೋಡ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಹೆರಿಗೆ ಆಗಿರುವ ಮಹಿಳೆಯರ ದಾಖಲಾತಿಗಳನ್ನು ಪರಿಶೀಲಿಸಲಾಗಿದೆ. ಗ್ರಾಮದಲ್ಲಿ ಗರ್ಭಿಣಿಯರ ಮತ್ತು ಬಾಣಂತಿಯರ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಮಗುವಿನ ಪಾಲಕರ ಪತ್ತೆಯಾಗಿಲ್ಲ. ಈಗಾಗಲೇ ನವಜಾತ ಗಂಡು ಶಿಶುವನ್ನು ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪಾಲಕರ ಪತ್ತೆ ಹಚ್ಚುವ ಕಾರ್ಯ ಜಾರಿಯಲ್ಲಿದೆ. 

ಈ ಕುರಿತು ರಟಕಲ್‌ ಪೊಲೀಸ್‌ ಠಾಣೆಯಲ್ಲಿ ಅಂಗನವಾಡಿ ಮತ್ತು ಆಶಾಕಾರ್ಯಕರ್ತೆಯರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next