Advertisement

China ಬಳಿ ಅಂಗಲಾಚಿದ ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು!

08:01 PM Jan 09, 2024 | Team Udayavani |

ಫುಜಿಯಾನ್: ಭಾರತದಿಂದ ಪ್ರವಾಸೋದ್ಯಮ ಹಿನ್ನಡೆಯನ್ನು ಎದುರಿಸುತ್ತಿರುವ ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಮಂಗಳವಾರ ಹೆಚ್ಚಿನ ಪ್ರವಾಸಿಗರನ್ನು ದ್ವೀಪ ರಾಷ್ಟ್ರಕ್ಕೆ ಕಳುಹಿಸುವ ಪ್ರಯತ್ನಗಳನ್ನು ಹೆಚ್ಚಿಸುವಂತೆ ಚೀನಾ ಬಳಿ ಅಂಗಲಾಚಿದ್ದಾರೆ.

Advertisement

ಚೀನಾಕ್ಕೆ ಅಧಿಕೃತ ಭೇಟಿ ನೀಡಿರುವ ಮುಯಿಝು, ಫುಜಿಯಾನ್ ಪ್ರಾಂತ್ಯದಲ್ಲಿ ಮಾಲ್ದೀವ್ಸ್ ಬಿಸಿನೆಸ್ ಫೋರಂ ಉದ್ದೇಶಿಸಿ ಮಾತನಾಡಿ, ಚೀನಾ, ಮಾಲ್ದೀವ್ಸ್ ನ ಅತ್ಯಾಪ್ತ ಮಿತ್ರ ರಾಷ್ಟ್ರ ಮತ್ತು ಅಭಿವೃದ್ಧಿ ಪಾಲುದಾರರಲ್ಲಿ ಒಂದಾಗಿದೆ ಎಂದು ಕರೆದಿದ್ದಾರೆ.

“ಕೋವಿಡ್ ಗೂ ಮೊದಲು ಚೀನಾ ನಮ್ಮ ಮೊದಲ ಮಾರುಕಟ್ಟೆ ಆಗಿತ್ತು. ಚೀನಾ ಈ ಸ್ಥಾನವನ್ನು ಮರಳಿ ಪಡೆಯಲು ನಾವು ಪ್ರಯತ್ನಗಳನ್ನು ತೀವ್ರಗೊಳಿಸಬೇಕೆಂಬುದು ನನ್ನ ವಿನಂತಿಯಾಗಿದೆ” ಎಂದು ಮೊಹಮ್ಮದ್ ಮುಯಿಝು ಅವರ ಅಧಿಕೃತ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

ಚೀನಾದ ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್ (BRI) ಯೋಜನೆಯನ್ನು ಮುಯಿಝು ಶ್ಲಾಘಿಸಿ ಅದರಲ್ಲಿ ಸೇರಲು ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಹಿಂದೂ ಮಹಾಸಾಗರದ ದ್ವೀಪದಲ್ಲಿ ಸಮಗ್ರ ಪ್ರವಾಸೋದ್ಯಮ ವಲಯವನ್ನು ಅಭಿವೃದ್ಧಿಪಡಿಸಲು ಉಭಯ ದೇಶಗಳು 50 ಮಿಲಿಯನ್ USD ಯೋಜನೆಗೆ ಸಹಿ ಹಾಕಿವೆ.

Advertisement

Udayavani is now on Telegram. Click here to join our channel and stay updated with the latest news.

Next