Advertisement

ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌: ಪ್ರಣಯ್‌ ಕ್ವಾರ್ಟರ್‌ ಫೈನಲ್‌ ಪಯಣ

10:29 PM Jan 12, 2023 | Team Udayavani |

ಕೌಲಾಲಂಪುರ: “ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌’ ಪಂದ್ಯಾವಳಿ ಯಲ್ಲಿ ಮತ್ತೂಂದು ಅಮೋಘ ಪ್ರದರ್ಶನ ನೀಡಿದ ಭಾರತದ ಎಚ್‌.ಎಸ್‌. ಪ್ರಣಯ್‌ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಕೂಡ ಇದೇ ಹಂತಕ್ಕೆ ಮುನ್ನಡೆದಿದ್ದಾರೆ.

Advertisement

ಎಚ್‌.ಎಸ್‌. ಪ್ರಣಯ್‌ ಗುರುವಾರದ ಪುರುಷರ ಸಿಂಗಲ್ಸ್‌ ಪಂದ್ಯದಲ್ಲಿ ಇಂಡೋನೇಷ್ಯಾದ 19ನೇ ರ್‍ಯಾಂಕಿಂಗ್‌ ಆಟಗಾರ ಚಿಕೊ ಔರ ದ್ವಿ ವಾರ್ಡೊಯೊ ವಿರುದ್ಧ 21-9, 15-21, 21-16 ಅಂತರದ ಗೆಲುವು ಸಾಧಿಸಿದರು.

ಚಿರಾಗ್‌ ಶೆಟ್ಟಿ- ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಇಂಡೋನೇಷ್ಯಾದ ಮುಹಮ್ಮದ್‌ ಶೋಹಿಬುಲ್‌-ಬಗಾಸ್‌ ಮೌಲಾನ ಅವರನ್ನು 21-19, 22-20 ಅಂತರದಿಂದ ಹಿಮ್ಮೆಟ್ಟಿಸಿದರು.

ವನಿತಾ ಜೋಡಿಗೆ ಸೋಲು

ವನಿತಾ ಡಬಲ್ಸ್‌ನಲ್ಲಿ ಟ್ರೀಸಾ ಜಾಲಿ-ಗಾಯತ್ರಿ ಗೋಪಿ ಚಂದ್‌ ದಿಟ್ಟ ಹೋರಾಟ ನೀಡಿಯೂ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಪರಾಭವ ಗೊಂಡರು. ಇವರನ್ನು ಬಲ್ಗೇರಿಯಾದ ಸಹೋದರಿಯರಾದ ಗ್ಯಾಬ್ರಿàಲಾ ಸ್ಟೊಯೇವಾ-ಸ್ಟೆಫಾನಿ ಸ್ಟೊಯೇವಾ ಸೇರಿಕೊಂಡು 21-13, 15-21, 21-17ರಿಂದ ಹಿಮ್ಮೆಟ್ಟಿಸಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next