ಕೌಲಾಲಂಪುರ: ಭಾರತದ ಸ್ಟಾರ್ ಶಟ್ಲರ್ ಪಿ.ವಿ. ಸಿಂಧು, ಶ್ರೀಕಾಂತ್ ಮತ್ತು ಎಚ್. ಎಸ್. ಪ್ರಣಯ್ ಉತ್ತಮ ಪ್ರದರ್ಶನ ನೀಡಿ ಮಲೇಷ್ಯ ಮಾಸ್ಟರ್ ಬ್ಯಾಡ್ಮಿಂಟನ್ ಕೂಟದಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಆರನೇ ಶ್ರೇಯಾಂಕದ ಸಿಂಧು ಅವರು ಡೆನ್ಮಾರ್ಕ್‌ನ ಲಿನೆ ಕ್ರಿಸ್ಟೋಫರÕನ್ ಅವರನ್ನು 21-13, 17-21, 21-18 ಗೇಮ್‌ಗಳಿಂದ ಸೋಲಿಸಿದರು. ಮುಂದಿನ ಸುತ್ತಿನಲ್ಲಿ ಸಿಂಧು ಜಪಾನಿನ ಆಯಾ ಒಹೋರಿ ಅವರನ್ನು ಎದುರಿಸಲಿದ್ದಾರೆ. ಫ್ರಾನ್ಸ್‌ನ ಜೂನಿಯರ್ ಪೊಪೋವ್ ಅವರನ್ನು 21-12, 21-16 ಗೇಮ್‌ಗಳಿಂದ ಕೆಡಸಿದ ಕಿದಂಬಿ ಶ್ರೀಕಾಂತ್ ದ್ವಿತೀಯ ಸುತ್ತು ಪ್ರವೇಶಿಸಿದರು. ಮುಂದಿನ ಸುತ್ತಿನಲ್ಲಿ ಅವರು ಥಾಯ್ಲೆಂಡಿನ ಕುನÉವುಟ್ ವಿಟಿಸರ್ನ್ ಅವರನ್ನು ಎದುರಿಸಲಿದ್ದಾರೆ.
ಇನ್ನೊಂದು ಪಂದ್ಯದಲ್ಲಿ ಪ್ರಣಯ್ ಆರನೇ ರ್‍ಯಾಂಕಿನ ಚೈನೀಸ್ ತೈಪೆಯ ಟಿಯೆನ್ ಚೆನ್ ಚೊ ಅವರನ್ನು 16-21, 21-14, 21-13 ಗೇಮ್‌ಗಳಿಂದ ಸೋಲಿಸಿ ಅಚ್ಚರಿಗೊಳಿಸಿದರು. ಮುಂದಿನ ಸುತ್ತಿನಲ್ಲಿ ಅವರು ಚೀನದ ಶಿ ಫೆಂಗ್ ಲಿ ಅವರನ್ನು ಎದುರಿಸಲಿದ್ದಾರೆ.