Advertisement

ಮಲಯಾಳಿ ನಟಿ ಬಂಧನ

06:00 AM Jul 07, 2018 | Team Udayavani |

ಕೊಲ್ಲಂ: ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ ಆರೋಪದಲ್ಲಿ ಮಲಯಾಳಂ ಟಿವಿ ನಟಿ, ನಿರೂಪಕಿ ಸೂರ್ಯ ಶಶಿಕುಮಾರ್‌ರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಜತೆಗೆ, ಅವರ ತಾಯಿ ರಮಾದೇವಿ ಮತ್ತು ಸಹೋದರಿ ಶ್ರುತಿ ಅವರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಟಿ ಮನೆ ಮೇಲೆ ದಾಳಿ ನಡೆಸಿದಾಗ 57 ಲಕ್ಷ ರೂ. ಮೌಲ್ಯದ ನಕಲಿ ಕರೆನ್ಸಿ ನೋಟುಗಳು, ಮುದ್ರಣ ಯಂತ್ರ ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳ ಲಾಗಿದೆ. ಕಳೆದ ಸೆಪ್ಟೆಂಬರ್‌ನಿಂದಲೂ ತಾವು ನಕಲಿ ನೋಟು ಮುದ್ರಿಸುತ್ತಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next