ಎಚ್.ಡಿ.ಕೋಟೆ: ತಾಲೂಕಿನ ಕೇರಳ ಗಡಿ ಭಾಗದ ಹಲವಾರು ಗ್ರಾಮಗಳು ಭಾಷೆ ಅಷ್ಟೇ ಅಲ್ಲದೆ ಅಂಗಡಿ ಮುಂಗಟ್ಟು ಗಳು ಮಲೆಯಾಳಂ ಮಯವಾಗುತ್ತಿವೆ. ತಾಲೂಕಿನ ಗಡಿ ಭಾಗದ ಡಿ.ಬಿ. ಕುಪ್ಪೆ ಗ್ರಾಮದಲ್ಲಿ ಎಲ್ಲಿ ನೋಡಿದರೂ ಮಲೆಯಾಳಂ ನಾಮಫಲಕಗಳು ಕಂಡು ಬರುತ್ತಿವೆ. ಡಿ.ಬಿ.ಕುಪ್ಪೆ ಗ್ರಾಮದ ಪ್ರತಿ ಅಂಗಡಿ ಮುಂಗ ಟ್ಟುಗಳ ಮುಖ್ಯದ್ವಾರದಲ್ಲಿ ಮಲೆಯಾಳಂ ಭಾಷಾ ನಾಮಫಲಕಗಳು ರಾರಾಜಿ ಸುತ್ತಿರುವ ದೃಶ್ಯವನ್ನು ನೋಡಿದರೆ ಕೇರಳ ರಾಜ್ಯಕ್ಕೆ ಬಂದಿದ್ದೇವಾ ಎಂಬ ಭಾವನೆ ಮೂಡು ತ್ತದೆ. ಬೆರಳಣಿಕೆ ಯಷ್ಟು ಕನ್ನಡ ನಾಮಫಲಕಗಳು ಹೊರತು ಪಡಿಸಿದರೆ ಇನ್ನುಳಿದಂತೆ ಇಡೀ ಡಿ.ಬಿ. ಕುಪ್ಪೆ ಪರಭಾಷೆ ಹಾವಳಿಗೆ ತುತ್ತಾಗಿದೆ. ಗ್ರಾಮ ದಲ್ಲಿ ಕಳೆದ ಒಂದು ತಿಂಗಳಿ ನಿಂದ ಚಿತ್ರೀಕರಣ ನಡೆಯುತ್ತಿದೆ. ಹೀಗಾಗಿ ಗ್ರಾಮದ ಹಲವು ಕಡೆಗಳಲ್ಲಿ ಮಲೆಯಾಳಂ ಭಾಷೆ ನಾಮ ಫಲಕ ಅಳವಡಿಸಲಾಗಿದೆ ಎಂಬ ಉತ್ತರ ಬರುತ್ತಿದೆ.
ಕೇರಳದ ಗಡಿಭಾಗ ಬಹುತೇಕ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಆವರಿಸಿದ್ದು, ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಎಂದು ಘೋಷಿಸಲಾಗಿದೆ. ಪರಿಸ್ಥಿತಿ ಹೀಗಿರುವಾಗ ಜನರ ಹೇಳಿಕೆಯಂತೆ ಕಳೆದ ಒಂದು ತಿಂಗಳಿಂದ ಚಿತ್ರೀಕರಣಕ್ಕೆ ಅನುಮತಿ ನೀಡಿದವರು ಯಾರು?, ವನ್ಯಜೀವಿ ಸಂರಕ್ಷಿತ ಪ್ರದೇಶದಲ್ಲಿ ಚಿತ್ರೀಕರಣಕ್ಕೆ ಅವಕಾಶ ಇದಿಯಾ? ಎಂಬ ಪ್ರಶ್ನೆಗಳು ಮೂಡುತ್ತಿವೆ. ಅಂಗನವಾಡಿ ಕೇಂದ್ರ, ಸರ್ಕಾರ ಶಾಲೆ ಸೇರಿದಂತೆ ಕುಡಿಯುವ ನೀರಿ ಗಾಗಿ ಕೊಳವೆ ಬಾವಿ ತೆಗೆಯಲು ಅನುಮತಿ ನಿರಾಕರಿಸುವ ಅರಣ್ಯ ಇಲಾಖೆ ಚಿತ್ರೀಕರಣಕ್ಕೆ ಅನುಮತಿ ನೀಡಿದೆಯೇ ಅನ್ನುವ ಅನುಮಾನ ಕಾಡುತ್ತಿದೆ.
ಚಿತ್ರೀಕರಣಕ್ಕೆ ಮಲೆಯಾಳಿ ಫಲಕ ಏಕೆ?: ಚಿತ್ರೀಕರಣಕ್ಕೆ ಕರ್ನಾಟಕದ ಗಡಿಭಾಗದ ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲೂಕಿನ ಗಡಿಭಾಗ ಆಯ್ಕೆ ಮಾಡಿಕೊಂಡು ಇಡೀ ಗ್ರಾಮವನ್ನು ಮಲೆಯಾಳಂ ಮಯ ಮಾಡುವ ಹುನ್ನಾರ ಇದಿಯಾ ಎಂಬ ಪ್ರಶ್ನೆ ಕೂಡ ಮೂಡುತ್ತಿದೆ. ಡಿ. ಬಿ.ಕುಪ್ಪೆ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಕಾರ್ಯಾ ಲಯ ಕಾರ್ಯನಿರ್ವಹಿಸುತ್ತಿದ್ದರೂ ಕನ್ನಡ ಭಾಷಾ ನಾಮ ಫಲಕ ತೆರವು ಗೊಳಿಸಿ ಮಲೆಯಾಳಂ ಭಾಷಾ ನಾಮಫಲಕ ಅಳವಡಿಸಿದರೂ ಚಕಾರ ಎತ್ತುತ್ತಿಲ್ಲ.
ತನಿಖೆ ನಡೆಸಿ: ನಾಗರಹೊಳೆ ಅರಣ್ಯದಲ್ಲಿ ನಡುವಿನಲ್ಲಿ ರುವ ಡಿ.ಬಿ.ಕುಪ್ಪೆಯ ಅರಣ್ಯ ಪ್ರದೇಶದಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡಿರುವುದರ ಕುರಿತು ತನಿಖೆ ನಡೆಸಬೇಕು. ಶೂಟಿಂಗ್ ವೇಳೆ ಏನಾದರೂ ಅವಘಡ ಸಂಭವಿಸಿ ಅರಣ್ಯ ಮತ್ತು ವನ್ಯಜೀವಿಗಳ ಜೀವಕ್ಕೆ ಹಾನಿಯಾದರೆ ಅದಕ್ಕೆ ಹೊಣೆ ಯಾರು?, ಅನುಮತಿ ನೀಡಿರುವುದು ಸರಿಯೇ?, ಈ ಕುರಿತು ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳು ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ಪರಿಸರ ಪ್ರೇಮಿ ಗಳು ಹಾಗೂ ನಾಗರಿಕರು ಆಗ್ರಹಿಸಿದ್ದಾರೆ.
ಗಡಿ ಗ್ರಾಮಗಳು ಮಲೆಯಾಳಂ ಮಯ : ತಾಲೂಕಿನಿಂದ 40 ಕಿ.ಮೀ. ಅಂತರವಿರುವ ಬಾವಲಿ ಗ್ರಾಮವು, ಕೇರಳ ಮತ್ತು ಕರ್ನಾಟಕರಾಜ್ಯದ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಗಡಿಭಾಗವಾಗಿದೆ. ಬಾವಲಿ ಗ್ರಾಮಕ್ಕೆ ಮೊದಲು ಹುಲ್ಲುಮೊಟ್ಲು, ಕಡೇಗದ್ದೆ, ವಡಕನಮಾಳ, ಮಚ್ಚಾರು, ಹೊಸೂರು, ಗೋಳೂರು ಹಾಡಿ, ಆನೆಮಾಳ, ಡಿ.ಬಿ.ಕುಪ್ಪೆ ಗ್ರಾಮಗಳು ಇವೆ. ಇಲ್ಲಿನ ಬಹುತೇಕ ಜನರು ಮಲೆಯಾಳಂ ಭಾಷೆಗೆ ಮಾರು ಹೋಗುತ್ತಿದ್ದಾರೆ. ಈ ಭಾಗದಲ್ಲಿ ಸಂಘಟನೆಗಳಷ್ಟೇ ಅಲ್ಲದೇ ಜಿಲ್ಲಾಡಳಿತ, ತಾಲೂಕು ಆಡಳಿತ ಕನ್ನ ಭಾಷೆ ಬಗ್ಗೆ ಜನರಲ್ಲಿ ಅರಿವು ಮೂಡಿಸದೇ ಇದ್ದರೆ ಈ ಭಾಗ ಕಾಲ ಕ್ರಮೇಣ ಮಲೆಯಾಳಂ ಭಾಷೆಯಿಂದ ಆವರಿಸಿಕೊಂಡು ಕನ್ನಡ ಭಾಷೆ ಸಂಸ್ಕೃತಿ ನಶಿಸುವುದರಲ್ಲಿ ಸಂಶಯ ಇಲ್ಲ.
ಎಚ್.ಡಿ.ಕೋಟೆ ತಾಲೂಕಿನ ಗಡಿಭಾಗವಾದ ಡಿ.ಬಿ.ಕೊಪ್ಪೆ ಗ್ರಾಮದಲ್ಲಿ ಮಲೆಯಾಳಂ ನಾಮಫಲಕ ಅಳವಡಿಸಿರುವುದು “ಉದಯವಾಣಿ’ ಮೂಲಕ ತಮಗೆ ತಿಳಿದು ಬಂದಿದೆ. ಈ ಕುರಿತು ಗ್ರಾಮ ಪಂಚಾಯ್ತಿಯಿಂದ ಮಾಹಿತಿ ಪಡೆದುಕೊಂಡು ಬಳಿಕ ಗ್ರಾಮಕ್ಕೆ ಭೇಟಿ ನೀಡಿ ಮಲೆಯಾಳಂ ಫಲಕ ತೆರವುಗೊಳಿಸಿ, ಕನ್ನಡ ನಾಮಫಲಕ ಹಾಕಿಸಲು ಕ್ರಮ ಕೈಗೊಳ್ಳಲಾಗುವುದು.
–ಆರ್.ಮಂಜುನಾಥ್, ತಹಶೀಲ್ದಾರ್
-ಎಚ್.ಬಿ.ಬಸವರಾಜು