Advertisement

ಮಲಯಾಳಂ ಸಿನಿಮಾ ರಂಗದ ಖ್ಯಾತ ನಟಿ, ನಿರೂಪಕಿ ಸುಬಿ ಸುರೇಶ್‌ ನಿಧನ

11:39 AM Feb 22, 2023 | Team Udayavani |

ಕೊಚ್ಚಿ: ಅನಾರೋಗ್ಯದಿಂದ ಬಳಲುತ್ತಿದ್ದ ಮಲಯಾಳಂ ಸಿನಿಮಾ ರಂಗದ ಖ್ಯಾತ ನಟಿ, ನಿರೂಪಕಿ ಸುಬಿ ಸುರೇಶ್‌ (41) ನಿಧನರಾಗಿದ್ದಾರೆ.

Advertisement

ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದ ಸುಬಿ ಸುರೇಶ್‌ ಕಳೆದ ಕೆಲ ಸಮಯದಿಂದ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಬುಧವಾರ ( ಫೆ.22 ರಂದು)  ಕೊನೆಯುಸಿರೆಳೆದಿದ್ದಾರೆ.

ಡ್ಯಾನ್ಸರ್‌ ಹಾಗೂ ಕಾಮಿಡಿಯನ್‌ ಆಗಿ ಕೆರಿಯರ್‌ ಆರಂಭಿಸಿದ ಸುಬಿ ಸುರೇಶ್‌, ‘ಮೇಡ್ ಫಾರ್ ಈಚ್ ಅದರ್’ ಹಾಗೂ ʼಕುಟ್ಟಿ ಪಟ್ಟಾಳಂʼ ಎಂಬ ಮಕ್ಕಳ ಕಾರ್ಯಕ್ರಮದ ನಿರೂಪಕಿಯಾಗಿ ಖ್ಯಾತಿಯನ್ನು ಪಡೆದುಕೊಂಡಿದ್ದರು.

‘ಗೃಹನಾಥನ್’, ‘ತಸ್ಕರ ಲಹಲಾ’, ‘ಎಲ್ಸಮ್ಮ ಎನ್ನ ಅಂಕುಟ್ಟಿ’, ʼಡ್ರಾಮಾʼ,ʼಕಾರ್ಯಸ್ಥಾನ್‌ʼ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು.

ಇದಲ್ಲದೆ ಲಾಕ್‌ ಡೌನ್‌ ಸಮಯದಲ್ಲಿ ಫಿಟ್‌ ನೆಸ್‌ ಕುರಿತು ಇವರು ಮಾಡುತ್ತಿದ್ದ ವಿಡಿಯೋಗಳು ಫ್ಯಾಮಿಲಿ ಅಡಿಯನ್ಸ್‌ ಗಳ ಗಮನ ಸೆಳೆಯುತ್ತಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next