Advertisement

Road mishap: ಭೀಕರ ಅಪಘಾತ; 39 ರ ಹರೆಯದಲ್ಲೇ ಇಹಲೋಕ ತ್ಯಜಿಸಿದ ಖ್ಯಾತ ನಟ

10:32 AM Jun 05, 2023 | Team Udayavani |

ಕೊಚ್ಚಿ: ಭೀಕರ ರಸ್ತೆ ಅಪಘಾತ ಸಂಭವಿಸಿ ಮಲಯಾಳಂ ಸಿನಿಮಾ ರಂಗದ ಖ್ಯಾತ ನಟರೊಬ್ಬರು ಮೃತಪಟ್ಟು, ಇತರ ಮೂವರು ಕಲಾವಿದರು ಗಾಯಗೊಂಡಿರುವ ಘಟನೆ ಸೋಮವಾರ (ಜೂ.5 ರಂದು) ನಸುಕಿನ ವೇಳೆ ಕೇರಳದ ಕೈಪಮಂಗಲಂನಲ್ಲಿ ನಡೆದಿರುವುದು ವರದಿಯಾಗಿದೆ.

Advertisement

ಮಾಲಿವುಡ್‌ ಸಿನಿಮಾ ರಂಗ ಹಾಗೂ ಕಿರುತೆರೆಯಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದ ಕೊಲ್ಲಂ ಸುಧಿ (39) ಮೃತ ನಟ. ಇದರೊಂದಿಗೆ ಮಿಮಿಕ್ರಿ ಕಲಾವಿದರಾದ ಬಿನು ಆದಿಮಾಲು, ಉಲ್ಲಾಸ್ ಮತ್ತು ಮಹೇಶ್ ಘಟನೆಯಲ್ಲಿ ಗಾಯಗೊಂಡಿದ್ದಾರೆ.

ಘಟನೆ ಹಿನ್ನೆಲೆ: ಕೊಲ್ಲಂ ಸುಧಿ ಸೇರಿದಂತೆ ಇತರ ಕಲಾವಿದರು ವಟಕರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ವಾಪಾಸಾಗುತ್ತಿದ್ದರು. ಸೋಮವಾರ ನಸುಕಿನ 4:30 ರ ಹೊತ್ತಿಗೆ ಅವರು ಸಂಚರಿಸುತ್ತಿದ್ದ ಕಾರು ಗೂಡ್ಸ್‌ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ಘಟನೆಯಲ್ಲಿ ಸುಧಿ ಅವರ ತಲೆಗೆ ತೀವ್ರತರದ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ಅವರು ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ. ಗಾಯಗೊಂಡ ಮೂವರನ್ನು ಕೊಡುಂಗಲ್ಲೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊಲ್ಲಂ ಸುಧಿ ಅವರು 2015 ರಲ್ಲಿ  ಅಜ್ಮಲ್ ನಿರ್ದೇಶನದ ʼಕಾಂತರಿʼ ಚಿತ್ರದ ಮೂಲಕ ನಟನಾ ಲೋಕಕ್ಕೆ ಕಾಲಿಟ್ಟರು. ನಟನೆಯೊಂದಿಗೆ ಅವರು ಜನಪ್ರಿಯ ಮಿಮಿಕ್ರಿ ಕಲಾವಿದರಾಗಿದ್ದರು. ಅನೇಕ ಟಿವಿ ಕಾರ್ಯಕ್ರಮಗಳಲ್ಲಿ ಅವರು ಕಾಣಿಸಿಕೊಂಡಿದ್ದರು.

ʼಕಟ್ಟಪ್ಪನಾಯಿಲೆ ರಿತ್ವಿಕ್ ರೋಷನ್ʼ , ʼಕುಟ್ಟನಾಡನ್ ಮಾರ್ಪ್ಪಪ್ಪʼ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅವರು ನಟಿಸಿದ್ದರು.

Advertisement

ಕೇರಳ ಸಿಎಂ ಪಿಣರಾಯಿ ವಿಜಯನ್ ಸೇರಿದಂತೆ ಮಾಲಿವುಡ್‌ ನ ಅನೇಕ ಕಲಾವಿದರು, ಗಣ್ಯರು ನಟನ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next