ಕೊಚ್ಚಿ: ಮಲಯಾಳಂ ಸಿನಿಮಾರಂಗದಲ್ಲಿ ತನ್ನ ಪೋಷಕ ಪಾತ್ರಗಳಿಂದ ಸಿನಿರಸಿಕರನ್ನು ರಂಜಿಸಿದ್ದ ಹರೀಶ್ ಪೆಂಗನ್ (48) ನಿಧನರಾಗಿದ್ದಾರೆ.
ಲಿವರ್ ಸಮಸ್ಯೆಯಿಂದ ಅನಾರೋಗ್ಯವಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಮಂಗಳವಾರ (ಮೇ.30 ರಂದು) ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಇತ್ತೀಚೆಗೆ ನಟ ಹರೀಶ್ ಹೊಟ್ಟೆನೋವೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಕೆಲವೊಂದು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದ ಬಳಿಕ ಅವರಿಗೆ ಯಕೃತ್ತಿನ ಕಸಿ ಮಾಡಬೇಕೆಂದು ವೈದ್ಯರು ಹೇಳಿದ್ದರು. ಇದೇ ಪರಿಸ್ಥಿತಿಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಆಸ್ಪತ್ರೆಯ ಖರ್ಚು ವೆಚ್ಚಕ್ಕೂ ಆರ್ಥಿಕವಾಗಿ ಕಷ್ಟವಾಗಿತ್ತು. ಈ ವೇಳೆ ಅವರ ಸ್ನೇಹಿತರು ಅವರ ಸಹಾಯಕ್ಕೆ ನಿಂತಿದ್ದರು ಎಂದು ವರದಿ ತಿಳಿಸಿದೆ.
ನಟನ ಆರೋಗ್ಯ ದಿನೇ ದಿನೇ ಹದಗೆಡುತ್ತ ಹೋಗಿದ್ದು, ಮಂಗಳವಾರ ಅವರು ನಿಧನರಾಗಿದ್ದಾರೆ.
Related Articles
ನಟ ಹರೀಶ್ ಸೂಪರ್ ಹಿಟ್ ʼ ಮಿನ್ನಲ್ ಮುರಳಿʼ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರ ನಿಧನಕ್ಕೆ ನಟ ಟೊವಿನೋ ಥಾಮಸ್ ಸಂತಾಪ ಸೂಚಿಸಿದ್ದಾರೆ.
ಹರೀಶ್ ಪೆಂಗನ್ ಅವರು ಮಲಯಾಳಂ ಚಿತ್ರರಂಗದಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ಮಿಂಚಿದ್ದರು.
ʼಮಹೇಶಿಂತೆ ಪ್ರತೀಕಾರಂʼ, ʼಮಿನ್ನಲ್ ಮುರಳಿʼ, ʼಜೋ & ಜೋʼ ಮತ್ತು, ʼಶೆಫೀಕ್ಕಿಂತೆ ಸಂತೋಷಂʼ, ಮತ್ತು, ʼಜಯ ಜಯ ಜಯ ಜಯ ಹೇʼ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು.