Advertisement

ಕನ್ನಡಿಗ ನವೀನ್‌ ಜತೆ ನಟಿ ಭಾವನಾ ನಿಶ್ಚಿತಾರ್ಥ

03:45 AM Mar 10, 2017 | Team Udayavani |

ಕೊಚ್ಚಿ: ಬಹುಭಾಷಾ ನಟಿ, “ಜಾಕಿ’ ಚಿತ್ರ ಖ್ಯಾತಿಯ ಭಾವನಾ ಅವರಿಗೆ ಕನ್ನಡ ನಿರ್ಮಾಪಕ ನವೀನ್‌ ಜತೆ ಗುರುವಾರ ಸರಳ ನಿಶ್ಚಿತಾರ್ಥ ನೆರವೇರಿದೆ. ತ್ರಿಶೂರ್‌ನಲ್ಲಿನ ನಟಿಯ ಸ್ವಗೃಹದಲ್ಲಿ ಇಬ್ಬರೂ ಪರಸ್ಪರ ಉಂಗುರ ಬದಲಿಸಿಕೊಂಡಿದ್ದಾರೆ.

Advertisement

2012ರಲ್ಲಿ ಭಾವನಾ ನಟಿಸಿದ್ದ ಕನ್ನಡದ “ರೊಮಿಯೋ’ ಚಿತ್ರಕ್ಕೆ ನವೀನ್‌ ನಿರ್ಮಾಪಕರಾಗಿದ್ದರು. ಚಿತ್ರದ ಸೆಟ್‌ನಲ್ಲಿ ಮೊದಲ ಬಾರಿಗೆ ಭೇಟಿ ಆಗಿದ್ದರು. “ಅಲ್ಲಿಂದಲೇ ನಮ್ಮಿಬ್ಬರ ನಡುವೆ ಪ್ರೀತಿ ಚಿಗುರಿತು’ ಎಂದು 2014ರ ಸಂದರ್ಶನದಲ್ಲಿ ನಟಿ ಹೇಳಿಕೊಂಡಿದ್ದರು. ಭಾವನಾ ಅವರ ತಂದೆ ಬದುಕಿದ್ದಾಗಲೇ ಈ ವಿವಾಹ ನಿಶ್ಚಯವಾಗಿದ್ದು, ಈಗ ಮದುವೆಗೆ ಶುಭಕಾಲ ಕೂಡಿಬಂದಂತಾಗಿದೆ. ನಿಶ್ಚಿತಾರ್ಥ ಸಮಾರಂಭದಲ್ಲಿ ನಟ ಮಂಜು ವಾರಿಯರ್‌, ನಟಿ ಸಂಯುಕ್ತಾ ವರ್ಮಾ ಸೇರಿದಂತೆ ಆಹ್ವಾನಿತ 16 ಮಂದಿಯಷ್ಟೇ ಪಾಲ್ಗೊಂಡಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಬೆಂಗ್ಳೂರಲ್ಲಿ ಮದ್ವೆ: ಮಲಯಾಳಂ ಮಾಧ್ಯಮಗಳ ಪ್ರಕಾರ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ವಿವಾಹ ಸಮಾರಂಭ ಜರುಗಲಿದೆ. ಭಾವನಾ ಕನ್ನಡದ ಜಾಕೀ, ರೋಮಿಯೋ, ವಿಷ್ಣುವರ್ಧನ, ಟೋಪಿವಾಲ, ಮುಕುಂದ ಮರಾರಿ ಚಿತ್ರಗಳಲ್ಲಿ ನಟಿಸಿದ್ದು, ಸ್ಯಾಂಡಲ್‌ವುಡ್‌ನ‌ಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next