Advertisement

Malashree: ಮೆಜೆಸ್ಟಿಕ್ಸ್‌ ಚಿತ್ರದಲ್ಲಿ ಮಾಲಾಶ್ರೀ ಡ್ಯಾನ್ಸ್!

04:01 PM Sep 02, 2024 | Team Udayavani |

ನವನಿರ್ದೇಶಕ ರಾಮು ನಿರ್ದೇಶನದ ಮೆಜೆಸ್ಟಿಕ್‌-2 ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯ ಹಂತ ತಲುಪಿದೆ. ಈ ಚಿತ್ರದಿಂದ ಶಿಲ್ಪಾ ಶ್ರೀನಿವಾಸ್‌ ಅವರ ಪುತ್ರ ಭರತ್‌ ಹೊಸ ನಾಯಕನಾಗಿ ಇಂಡಸ್ಟ್ರಿಗೆ ಪರಿಚಯವಾಗುತ್ತಿದ್ದಾರೆ.

Advertisement

ಚಿತ್ರದುರ್ಗದ ಹೆಚ್‌.ಆನಂದಪ್ಪ ಅವರು ಈ ಚಿತ್ರವನು °ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಹೀರೋ ಇಂಟ್ರೊ ಡಕ್ಷನ್‌ ಸಾಂಗ್‌ ಚಿತ್ರೀಕರಣ ನಡೆಯಿತು. ಈ ಹಾಡಿ ನಲ್ಲಿ ಕನಸಿನ ರಾಣಿ ಮಾಲಾಶ್ರೀ ಹಾಗೂ ನಾಯಕ ಭರತ್‌ ಕುಮಾರ್‌ ಹಾಗೂ ನೂರಾರು ಡ್ಯಾನ್ಸರ್ ಅಭಿನಯಿಸಿದ್ದರು.

“ಇದರಲ್ಲಿ ನನ್ನದು ಒಂದು ಸ್ಪೆಷಲ್‌ ಎಂಟ್ರಿ. ನಾನು ಸ್ಟೆಪ್‌ ಹಾಕಿ ತುಂಬಾ ವರ್ಷವಾಯ್ತು. ಎಲ್ಲಾ ಮರೆತುಹೋಗಿದೆ ಎಂದೆ. ಆಗ ತ್ರಿಭುವನ್‌ ಮಾಸ್ಟರ್‌ ಬಂದು, “ಮೇಡಂ ನೀವು ಟ್ರೈ ಮಾಡಿ ನಾನಿದ್ದೇನೆ’ ಅಂದರು. ಇದು ಮಾರಮ್ಮ ದೇವಿ ಸಾಂಗ್‌. ನನ್ನ ಸ್ಟೆಪ್ಸ್‌ ನೋಡಿ ನನಗೇ ಖುಷಿಯಾಯ್ತು. ಇದು ನಾನೇನಾ ಅನಿಸ್ತು. ನನ್ನ ಹಿಂದಿನ ದಿನಗಳನ್ನು ನೆನಪಿಸಿತು’ ಎಂದು ಖುಷಿಯಿಂದ ಹೇಳಿಕೊಂಡರು ಮಾಲಾಶ್ರೀ.

Advertisement

Udayavani is now on Telegram. Click here to join our channel and stay updated with the latest news.

Next