ಮುಂಬಯಿ, ಆ. 20: ತಿಂಗಳ ಮೊದಲ ಹದಿನೈದು ದಿನಗಳಲ್ಲಿ ಮಲೇರಿಯಾ ಪ್ರಕರಣಗಳು ಗಮನಾರ್ಹ ಪ್ರಗತಿಯನ್ನು ತೋರಿಸಿದ್ದು, ಸುಮಾರು 600 ಪ್ರಕರಣಗಳು ಪತ್ತೆಯಾಗಿದ್ದು, ವರ್ಷದ ಮೊದಲ ಎರಡು ಮಾನ್ಸೂನ್ ಸಂಬಂಧಿತ ಸಾವುಗಳಿಗೆ ಕಾರಣವಾಗಿದೆ. 2019ರ ನಗರದ ಶೂನ್ಯ ಮಲೇರಿಯಾ ಸಾವಿನ ದಾಖಲೆಯನ್ನು ನಿರ್ಮಿಸಿತ್ತು.
ಜಿ ಉತ್ತರ ವಾರ್ಡ್‌ನಿಂದ 27 ವರ್ಷದ ಯುವಕನ ಮತ್ತು ಎಂ ಈಸ್ಟ್ ವಾರ್ಡ್‌ನಿಂದ 40 ವರ್ಷದವರೊಬ್ಬರು ಮಲೇರಿಯಾದಿಂದ ಸಾವನ್ನಪ್ಪಿದ್ದಾರೆ. ಇಬ್ಬರೂ ಸಹ ಕೋವಿಡ್ ಪಾಸಿಟಿವ್ ಆಗಿದ್ದರು. ಅಡಿಟ್ ಸಮಿತಿಯು ಮಲೇರಿಯಾದಿಂದ ಸಾವನ್ನಪ್ಪಿರುವ ಬಗ್ಗೆ ದೃಢಪಡಿಸಿದೆ ಎಂದು ಮುಂಬಯಿ ಮಹಾನಗರ ಪಾಲಿಕೆ ತಿಳಿಸಿದೆ. ಜುಲೈನಲ್ಲಿ 872 ಪ್ರಕರಣಗಳನ್ನು ದಾಖಲಿಸಿದ ಬಳಿಕ, ನಗರವು ಆಗಸ್ಟ್ 1ರಿಂದ 16ರ ನಡುವೆ 592 ಮಲೇರಿಯಾ ಪ್ರಕರಣಗಳನ್ನು ದಾಖಲಿಸಿದೆ. ಮಲೇರಿಯಾ ಮಾತ್ರ ಮಾನ್ಸೂನ್ ಕಾಯಿಲೆ ಎಂದು ಬಿಎಂಸಿ ಹೇಳಿದೆ.
ಗ್ಯಾಸ್ಟ್ರೋಎಂಟರೈಟಿಸ್, ಹೆಪಟೈಟಿಸ್ ಮತ್ತು ಲೆಪ್ಟೊಸ್ಪೈರೋಸಿಸ್ ಕಡಿಮೆ ಪ್ರಕರಣಗಳು ದಾಖಲಾಗುತ್ತಿವೆ. ಜಿ ಉತ್ತರ ವಾರ್ಡ್‌ನ ಮಹೀಮ್ ಮತ್ತು ಧಾರಾವಿಯ 27 ವರ್ಷದ ವ್ಯಕ್ತಿಯಲ್ಲಿ ಜುಲೈ 30ರಂದು ಜ್ವರ ಮತ್ತು ವಾಂತಿ ಕಂಡಿಬಂದಿದ್ದು, ಆಗಸ್ಟ್ 2ರಂದು ಉಸಿರಾಟ, ಅಧಿಕ ರಕ್ತದೊತ್ತಡ ಮತ್ತು ಎದೆನೋವಿನ ಹಿನ್ನೆಲೆ ಆಸ್ಪತ್ರೆಗೆ ದಾಖಲಾದರು. ಮದ್ಯ ವ್ಯಸನಿಯಾಗಿದ್ದ ಇವರು ಹೃದಯ ಸ್ನಾಯುಗಳ ಉರಿಯೂತವನ್ನು ಸಮಸ್ಯೆ ಹೊಂದಿದ್ದರು. ಉಸಿರಾಟದ ಸಮಸ್ಯೆಯಿಂದ ಅವರು ನಿಧನ ಹೊಂದಿದರು. ಕೋವಿಡ್-19ರಲ್ಲಿ ಮಲ್ಟಿ ಆರ್ಗನ್ ಡಿಸಂಕ್ಷನ್ ಸಿಂಡ್ರೋಮ್ ಹೊಂದಿರುವ ಪ್ಲಾಸ್ಮೋಡಿಯಮ್ ವೈವಾಕ್ಸ್ ಮಲೇರಿಯಾ’ ಸಾವಿಗೆ ಕಾರಣ ಎಂದು ಮುಂಬಯಿ ಮಹಾನಗರ ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.
ಎರಡನೇ ಸಾವು, ಎಂ ಈಸ್ಟ್ ವಾರ್ಡ್ ಗೋವಂಡಿಯ 40 ವರ್ಷದ ವ್ಯಕ್ತಿಯಾಗಿದ್ದು, ಜುಲೈ 25 ರಂದು ಜ್ವರ ಮತ್ತು ಕೆಮ್ಮಿನ ಹಿನ್ನೆಲ ನವಿಮುಂಬಯಿಯ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ನಾಲ್ಕು ದಿನಗಳ ಬಳಿಕ ಅವರನ್ನು ಮುಂಬಯಿಯ ಆಸ್ಪತ್ರೆಗೆ ದಾಖಲಿಸಲಾಯಿತು. ಪರೀಕ್ಷೆ ಸಂದರ್ಭ ರೋಗಿಯಲ್ಲಿ ಉಸಿರಾಟದ ತೊಂದರೆ ಮುಂದುವರೆದಿದೆ ಎಂದು ತೋರಿಸಿದ್ದು, ಅವರು ಕೋವಿಡ್ ಮತ್ತು ಮಲೇರಿಯಾಹೊಂದಿದ್ದು, ಸಾವನ್ನಪ್ಪಿದ್ದಾರೆ. ಆಗಸ್ಟ್ ಮಧ್ಯದಿಂದ ಸೆಪ್ಟಂಬರ್ ವರೆಗೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುವುದರಿಂದ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು ಮುನ್ನೆಚ್ಚರಿಕೆ ವಹಿಸಬೇಕು ಎಂದು ನಾಗರಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಾತ್ಮಾ ಜ್ಯೋತಿಬಾ ಫುಲೆ ಜನ ಆರೋಗ್ಯ ಯೋಜನೆಯಲ್ಲಿ ಸಂಯೋಜಿಸಲಾದ 20 ಕೋವಿಡ್ -19 ಚಿಕಿತ್ಸಾ ಪ್ಯಾಕೇಜ್ ಗಳನ್ನು ಅಕ್ಟೋಬರ್ 31ರ ವರೆಗೆ ಯೋಜನೆಯ ಭಾಗವಾಗಿ ವಿಸ್ತರಿಸಲಾಗಿದೆ. ಹಲವಾರು ಆಸ್ಪತ್ರೆಗಳು ಪ್ಯಾಕೇಜ್‌ಗಳನ್ನು ವಿಸ್ತರಿಸುತ್ತಿಲ್ಲವೆಂದು ರಾಜ್ಯವು ಗಮನಿಸಿದ್ದು, ಅಂತಹ ಆಸ್ಪತ್ರೆಗಳ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.