Advertisement

ಮಾಲನ್‌ ಶತಕ ವ್ಯರ್ಥ: ಆಸೀಸ್ ವಿರುದ್ಧ ಮೊದಲ ಏಕದಿನದಲ್ಲಿ ಇಂಗ್ಲೆಂಡ್ ಗೆ ಸೋಲು

08:41 PM Nov 17, 2022 | Team Udayavani |

ಅಡಿಲೇಡ್: ಪ್ರವಾಸಿ ಇಂಗ್ಲೆಂಡ್ ವಿರುದ್ದ ಇಲ್ಲಿ ಗುರುವಾರ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯ 6 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.

Advertisement

ಆಸ್ಟ್ರೇಲಿಯ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇಂಗ್ಲೆಂಡ್ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿತು. ಡೇವಿಡ್‌ ಮಾಲನ್‌ ಅವರು ಭರ್ಜರಿ ಶತಕ ಸಿಡಿಸಿ (134 ರನ್ ) ತಂಡ ಉತ್ತಮ ಮೊತ್ತ ಪೇರಿಸಲು ನೆರವಾದರು.

ಗುರಿ ಬೆನ್ನಟ್ಟಿದ ಆಸೀಸ್ 46.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 291 ರನ್ ಗಳಿಸಿ ಭರ್ಜರಿ ಜಯ ಗಳಿಸಿತು. ಆರಂಭಿಕ ಆಟಗಾರರು ಭರ್ಜರಿಯಾಗಿ ಆಟವಾಡಿ ತಂಡದ ಗೆಲುವನ್ನು ಸುಲಭವಾಗಿಸಿದರು. ಡೇವಿಡ್‌ ಮಾಲನ್‌ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸ್ಕೋರು ಪಟ್ಟಿ
ಇಂಗ್ಲೆಂಡ್‌
ಜಾಸನ್‌ ರಾಯ್‌ ಬಿ ಸ್ಟಾರ್ಕ್‌ 6
ಫಿಲ್‌ ಸಾಲ್ಟ್ ಸಿ ಸ್ಮಿತ್‌ ಬಿ ಕಮಿನ್ಸ್‌ 14
ಡೇವಿಡ್‌ ಮಾಲನ್‌ ಸಿ ಅಗರ್‌ ಬಿ ಝಂಪ 134
ಜೇಮ್ಸ್‌ ವಿನ್ಸ್‌ ಸಿ ಕ್ಯಾರೆ ಬಿ ಕಮಿನ್ಸ್‌ 5
ಸ್ಯಾಮ್‌ ಬಿಲ್ಲಿಂಗ್ಸ್‌ ಸಿ ಸ್ಟೋಯಿನಿಸ್‌ 17
ಜಾಸ್‌ ಬಟ್ಲರ್‌ ಸಿ ಅಗರ್‌ ಬಿ ಝಂಪ 29
ಲಿಯಮ್‌ ಡಾಸನ್‌ ರನೌಟ್‌ 11
ಕ್ರಿಸ್‌ ಜೋರ್ಡಾನ್‌ ಎಲ್‌ಬಿಡಬ್ಲ್ಯು ಬಿ ಝಂಪ 14
ಡೇವಿಡ್‌ ವಿಲ್ಲೆ ಔಟಾಗದೆ 34
ಲ್ಯೂಕ್‌ ವುಡ್‌ ಸಿ ಕ್ಯಾರೆ ಬಿ ಕಮಿನ್ಸ್‌ 10
ಓಲೆ ಸ್ಟೋನ್‌ ಔಟಾಗದೆ 0
ಇತರ: 13
ಒಟ್ಟು (50 ಓವರ್‌ಗಳಲ್ಲಿ 9 ವಿಕೆಟಿಗೆ) 287

ವಿಕೆಟ್‌ ಪತನ: 1-18, 2-20, 3-31, 4-66, 5-118, 6-158, 7-199, 8-259, 9-281

Advertisement

ಬೌಲಿಂಗ್‌:
ಮಿಚೆಲ್‌ ಸ್ಟಾರ್ಕ್‌ 10-0-45-1
ಪ್ಯಾಟ್‌ ಕಮಿನ್ಸ್‌ 10-0-62-3
ಕ್ಯಾಮರಾನ್‌ ಗ್ರೀನ್‌ 7-0-38-0
ಆಸ್ಟನ್‌ ಅಗರ್‌ 10-0-62-0
ಮಾರ್ಕಸ್‌ ಸ್ಟೋಯಿನಿಸ್‌ 3-0-23-1
ಆ್ಯಡಂ ಝಂಪ 10-0-55-3

ಆಸ್ಟ್ರೇಲಿಯ
ಡೇವಿಡ್‌ ವಾರ್ನರ್‌ ಸಿ ಬಿಲ್ಲಿಂಗ್ಸ್‌ ಬಿ ವಿಲ್ಲೆ 86
ಟ್ರ್ಯಾವಿಸ್‌ ಹೆಡ್‌ ಸಿ ಸಾಲ್ಟ್ ಬಿ ಜೋರ್ಡಾನ್‌ 69
ಸ್ಟೀವನ್‌ ಸ್ಮಿತ್‌ ಔಟಾಗದೆ 80
ಎಂ. ಲಾಬುಸ್‌ಚಾಗ್ನೆ ಸಿ ಬಟ್ಲರ್‌ ಬಿ ವಿಲ್ಲೆ 4
ಅಲೆಕ್ಸ್‌ ಕ್ಯಾರೆ ಸಿ ಸಾಲ್ಟ್ ಬಿ ಡಾಸನ್‌ 21
ಕ್ಯಾಮರಾನ್‌ ಗ್ರೀನ್‌ ಔಟಾಗದೆ 20
ಇತರ 11
ಒಟ್ಟು (46.5 ಓವರ್‌ಗಳಲ್ಲಿ 4 ವಿಕೆಟಿಗೆ) 291

ವಿಕೆಟ್‌ ಪತನ: 1-147, 2-200, 3-206, 4-244

ಬೌಲಿಂಗ್‌:
ಡೇವಿಡ್‌ ವಿಲ್ಲೆ 8-0-51-2
ಓಲಿ ಸ್ಟೋನ್‌ 10-1-50-0
ಲ್ಯೂಕ್‌ ವುಡ್‌ 10-0-59-0
ಕ್ರಿಸ್‌ ಜೋರ್ಡಾನ್‌ 7-0-49-1
ಲಿಯಮ್‌ ಡಾಸನ್‌ 10-0-65-1
ಡೇವಿಡ್‌ ಮಾಲನ್‌ 1.5-0-12-0

Advertisement

Udayavani is now on Telegram. Click here to join our channel and stay updated with the latest news.

Next